ವಾಷಿಂಗ್ಟನ್: ವಾಷಿಂಗ್ಟನ್ ಮೂಲದ ಸಾಫ್ಟ್‌ವೇರ್ ದೈತ್ಯ ರೆಡ್‌ಮಂಡ್ ಮೈಕ್ರೋಸಾಫ್ಟ್ 1,000 ಉದ್ಯೋಗಿಗಳನ್ನು ವಜಾ ಮಾಡುತ್ತಿದೆ ಎಂದು ವರದಿಯಾಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಮೈಕ್ರೋಸಾಪ್ಟ್ ನ ಕ್ಲೌಡ್ ಅಜೂರ್ ಸೇವಾ ಘಟಕದ ಆದಾಯದಲ್ಲಿ ತೀವ್ರ ರೀತಿಯ ಏರಿಕೆಯಾಗಿದ್ದರೂ ಕೂಡಾ ಜಾಗತಿಕವಾಗಿ 1 ಸಾವಿರ ಉದ್ಯೋಗಿಗಳನ್ನು ಸೇವೆಯಿಂದ ವಜಾ ಮಾಡಲಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.
ಭಾರತ ಕೂಡಾ ಪ್ರಭಾವಿತ ರಾಷ್ಟ್ರಗಳಲ್ಲಿ ಒಂದಾಗಿದ್ದು, ಅನಿರ್ಧಿಷ್ಟ ಸಂಖ್ಯೆಯ ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ವಜಾಗೊಳಿಸುತ್ತಿದೆ ಎಂಬುದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.
ಗೂರಗಾಂವ್, ನೊಯ್ಡಾದಲ್ಲಿನ ಎಂಎಸ್ ಎನ್ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರನ್ನು ಜೂನ್
30 ರೊಳಗೆ ವಜಾಗೊಳಿಸುವುದಾಗಿ ಹೇಳಲಾಗಿದೆ.
ನ್ಯೂಸ್ ಪ್ರೊಡ್ಯೂಸರ್ , ಎಡಿಟಿಂಗ್ ಉದ್ಯೋಗಿಗಳು ಸೇರಿದ್ದಾರೆ ಎಂದು ವಜಾಗೊಳುತ್ತಿರುವ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.
ಸುದ್ದಿ ವಿಭಾಗದಲ್ಲಿ ಎಂಎಸ್ ಎನ್ ಭಾರತದಲ್ಲಿ ಕೆಲವೊಂದು ಪಾತ್ರವನ್ನು ದೇಶದಲ್ಲಿ ನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ದೇಶದ 10 ಕಡೆಗಳಲ್ಲಿ ಸುಮಾರು 8 ಸಾವಿರ ಮೈಕ್ರೋಸಾಫ್ಟ್ ನೌಕರರು ಮಾರಾಟ, ಮಾರ್ಕೆಟಿಂಗ್, ಗ್ರಾಹಕರ ಸೇವಾ ಮತ್ತು ಬೆಂಬಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೈದರಾಬಾದಿನಲ್ಲಿ ಇದರ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವಿದ್ದು, ಶೇ.46 ರಷ್ಟು ಕಾರ್ಯಗಳು ಎಂಜಿನಿಯರಿಂಗ್ ಗೆ ಸಂಬಂಧಪಟ್ಟಿವೆ.
ಕೋವಿಡ್-19 ಕಾರಣದಿಂದಾಗಿ ಜಾಗತಿಕವಾಗಿ ಸಾಕಷ್ಟು ನಿರುದ್ಯೋಗ ಸಮಸ್ಯೆ ಉಂಟಾಗಿದ್ದು, ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್ ಮತ್ತು ಐಬಿಎಂನಂತಹ ದೈತ್ಯ ಕಂಪನಿಗಳು ನೌಕರರನ್ನು ವಜಾಗೊಳಿಸುವುದಿಲ್ಲ ಎಂದು ಆರಂಭದಲ್ಲಿ ಹೇಳಿಕೆ ನೀಡಿದ್ದವು.
Follow us on Social media