ಮೂಲ್ಕಿ : ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ಜಂಕ್ಷನ್ ಸಮೀಪದ ಬ್ಯಾಂಕ್ ಮುಂಭಾಗ ಶುಕ್ರವಾರ ಸಂಜೆ ಮುನೀರ್ ಎಂಬವರ ಅಳಿಯ ಹಾಗೂ ಮೂಡಬಿದ್ರೆಯ ಜ್ಯುವೆಲ್ಲರಿ ಮಾಲಕ ಲತೀಫ್ ಎಂಬವರನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾರ್ನಾಡ್ ಪರಿಸರದ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಮುಲ್ಕಿ ಕಾರ್ನಾಡ್ ಬಪ್ಪನಾಡುವಿನ ಮೊಹಮ್ಮದ್ ಹಾಸಿಮ್(27), ಬಪ್ಪನಾಡುವಿನ ರಿಯಾಝ್(33), ಉಡುಪಿ ಉಚ್ಚಿಲದ ಅಬೂಬಕ್ಕರ್ ಸಿದ್ಧಿಕ್ (27), ಬಪ್ಪನಾಡುವಿನ ಮೊಹಮ್ಮದ್ ರಾಝಿಂ (24) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹತ್ಯಾರು ಮತ್ತು ವಾಹನ ವಶಪಡಿಕೊಳ್ಳಲಾಗುದ್ದು ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ಕಾರ್ನಾಡ್ ದರ್ಗಾ ರೋಡ್ ನಿವಾಸಿ ಕಾಂಗ್ರೆಸ್ ಮುಖಂಡ ಮುನೀರ್, ಪುತ್ರ ಇಯಾಝ್ ಮತ್ತು ಅಳಿಯ ಲತೀಫ್ ಮೂಡಬಿದ್ರೆ ಮೇಲೆ ಕಾರ್, ಬೈಕ್‍ಗಳಲ್ಲಿ ಬೆನ್ನಟ್ಟಿ ಬಂದಿದ್ದ 9 ಮಂದಿಯ ದುಷ್ಕರ್ಮಿಗಳು ಬ್ಯಾಂಕ್ ಮುಂಭಾಗ ದಾಳಿ ನಡೆಸಿದ್ದರು. ಮುನೀರ್ ಮೇಲೆ ಹಲ್ಲೆ ನಡೆಯುವುದನ್ನು ಕಂಡ ಲತೀಫ್ ಅಡ್ಡಬಂದಿದ್ದುಅವರ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ಇಯಾಝ್ ಮೇಲೂ ದಾಳಿ ನಡೆಸಿ ಪರಾರಿಯಾಗಿದ್ದರು. ಲತೀಫ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿದ್ದರು .ಮುನೀರ್ ಮೇಲೆ ಪೂರ್ವದ್ವೇಷದಿಂದ ತಂಡ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿತ್ತು.
Follow us on Social media