ಮೂಡುಬಿದಿರೆ : ಒಟಿಪಿ ನಂಬರ್ ಪಡಕೊಂಡ ವಂಚಕನೊಬ್ಬ ಯುವತಿಯೊಬ್ಬಳ ಬ್ಯಾಂಕ್ ಖಾತೆಯಿಂದ ಆರು ಸಾವಿರ ರೂಪಾಯಿ ಹಣ ಲಪಟಾಯಿಸಿದ ಪ್ರಕರಣ ಮೂಡಬಿದಿರೆಯಲ್ಲಿ ಬೆಳಕಿಗೆ ಬಂದಿದೆ. ಅಲಂಗಾರಿನ ಯುವತಿಯೊಬ್ಬಳು ಕೊರೊನಾ ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡು ಮನೆಯಲ್ಲೇ ಇದ್ದಳು.
ಸೋಮವಾರ ಬೆಳಿಗ್ಗೆ ಈಕೆಯ ಮೊಬೈಲ್ಗೆ ಕರೆ ಮಾಡಿ ತನ್ನನ್ನು ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡ ವ್ಯಕ್ತಿ `ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗುತ್ತಿದೆ. ರಿನೀವಲ್ ಮಾಡಬೇಕಾದಲ್ಲಿ ನಿಮ್ಮ ಮೊಬೈಲ್ಗೆ ನಾನು ಒಟಿಪಿ ಕಳಿಸುತ್ತೇನೆ, ಅದನ್ನು ತಿಳಿಸಿ ಎಂದಿದ್ದ. ಆತ ಹೇಳಿದಂತೆ ತನ್ನ ಮೊಬೈಲ್ಗೆ ಬಂದ ಓಟಿಪಿ ನಂಬರನ್ನು ಯುವತಿ ತಿಳಿಸಿದ್ದಾಳೆ ಎನ್ನಲಾಗಿದೆ.
ಇದಾದ ಸ್ವಲ್ಪ ಹೊತ್ತಿನಲ್ಲಿ ಈಕೆಯ ಬ್ಯಾಂಕ್ ಖಾತೆಯಿಂದ 6 ಸಾವಿರ ರೂಪಾಯಿ ಹಣ ವಿತ್ಡ್ರಾ ಆದ ಮೆಸೇಜ್ ಮೊಬೈಲ್ಗೆ ಬಂದಿದ್ದು, ಅದಾಗಲೇ ಆಕೆಗೆ ತಾನು ಮೋಸ ಹೋದೆ ಎಂದು ಗೊತ್ತಾಗಿದೆ. ತಕ್ಷಣ ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಅಲ್ಲಿನ ಸಿಬ್ಬಂದಿ ನಾವೇನು ಮಾಡಲಾಗದು ಎಂದು ಅಸಹಾಯಕತೆ ತೋಡಿಕೊಂಡರನ್ನೆಲಾಗಿದೆ.
ಬ್ಯಾಂಕ್ ಆಫ್ ಬರೋಡಾದ ಜೊತೆ ವಿಲೀನಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆ ಸಂಖ್ಯೆಯಲ್ಲಿ ಬದಲಾವಣೆಯಾಗಿರುವ ಬಗ್ಗೆ ಗ್ರಾಹಕರ ಮೊಬೈಲ್ಗೆ ಮಾಹಿತಿ ಬರುತ್ತಿದ್ದು ಅದಕ್ಕೆ ಸಂಬಂಧಿಸಿ ತನಗೆ ಬ್ಯಾಂಕ್ ಅಧಿಕಾರಿ ಕರೆ ಮಾಡಿರಬಹುದೆಂದು ತಿಳಿದು ಯುವತಿ ಒಟಿಪಿ ಸಂಖ್ಯೆ ಕೊಟ್ಟಿರುವುದಾಗಿ ತಿಳಿದುಬಂದಿದೆ.
Follow us on Social media