ಮೂಡುಬಿದಿರೆ : ಮೂಡುಬಿದಿರೆಯ ದರೆಗುಡ್ಡೆಯಲ್ಲಿ ಮೂರು ವಾಹನಗಳು ಪರಸ್ಪರ ಡಿಕ್ಕಿಯಾಗಿ ಒಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಮರೋಡಿ ಮೂಲದ ಪಿಕಪ್ ವಾಹನ ನಾಟಿಗೆಂದು ನೇಜಿಯನ್ನು ಹೊತ್ತೊಯ್ಯಲು ಬೆಳುವಾಯಿಯಿಂದ ದರೆಗುಡ್ಡೆ ಮೂಲಕ ವೇಗವಾಗಿ ಸಾಗಿ ಹಂಗೊಟ್ಟು ಎಂಬಲ್ಲಿ ಬೊಲೇರೋ ಕಾರು ಹಾಗೂ ರಿಕ್ಷಾವೊಂದಕ್ಕೆ ಡಿಕ್ಕಿಯಾಗಿದೆ.
ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ವಾಹನಗಳಲಿದ್ದ ಸವಾರರು ಅಪಾಯದಿಂದ ಪಾರಾಗಿದ್ದಾರೆ.
ರಿಕ್ಷಾ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Follow us on Social media