ಮೂಡುಬಿದಿರೆ: ಇಲ್ಲಿನ ಬೆಳುವಾಯಿ ಮಠದಕೆರೆ ಬಳಿ ಸೋಮವಾರ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆದು, ಕಾರು ಚಾಲಕ ಮೃತಪಟ್ಟಿದ್ದಾರೆ.
ಕಾರ್ಕಳ ತಾಲೂಕಿನ ಜೋಡುಕಟ್ಟೆ ನಿವಾಸಿ ಸದಾನಂದ ಪೂಜಾರಿ(52) ಮೃತಪಟ್ಟವರು. ಸದಾನಂದ ಪೂಜಾರಿ ಹಾಗೂ ಅವರ ಪತ್ನಿ ಬೆಳುವಾಯಿಯ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಬಂದಿದ್ದರು. ಬೆಳುವಾಯಿ ಕಡೆಯಿಂದ ಹಿಂದಿರುಗುವಾಗ, ಕಾರ್ಕಳದ ಕಡೆಯಿಂದ ಬಂದ ಟಿಪ್ಪರ್ ಸದಾನಂದ ಅವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಗಂಬೀರವಾಗಿ ಗಾಯಗೊಂಡ ಸದಾನಂದ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.