ಮೂಡಬಿದ್ರೆ: ಮಧ್ಯಾಹ್ನದ ಊಟಕ್ಕೆ ಕೊಟ್ಟ ಚಿಕನ್ ಕಬಾಬ್ ನಲ್ಲಿ ಹುಳಗಳು ಪತ್ತೆ ಆಗಿರುವ ಘಟನೆ ಮೂಡಬಿದ್ರೆ ಬಳಿಯ ಹೊಟೇಲ್ ನಲ್ಲಿ ಪತ್ತೆಯಾಗಿದ್ದು,
ಗ್ರಾಹಕರು ಹೊಟೇಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುವ ವಿಡಿಯೋ ವೈರಲ್ ಆಗಿದೆ.
ಮೂಡಬಿದ್ರೆಯ ಹೊಟೇಲ್ ಗೆ ಬಂದಿದ್ದ ಗ್ರಾಹಕರು ಊಟಕ್ಕೆ ಕಬಾಬ್ ಆರ್ಡರ್ ಮಾಡಿದ್ದರು. ಅರ್ಧ ಊಟವನ್ನೂ ಮುಗಿಸಿದ್ದರು.
ಆದರೆ ಆರ್ಡರ್ ಮಾಡಿದ ಕಬಾಬ್ ನಲ್ಲಿ ಜೀವಂತ ಹುಳ ಪತ್ತೆಯಾಗಿದ್ದು, ಆಕ್ರೋಶಗೊಂಡ ಗ್ರಾಹಕರು ಹೊಟೇಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಆದರೆ ಹುಳ ಪತ್ತೆಯಾದರೂ ನಮ್ಮ ತಪ್ಪಿಲ್ಲ ಅಂತ ಹೊಟೇಲ್ ಸಿಬ್ಬಂದಿ ವಾದ ಮಾಡಿದ್ದಾರೆ.
ಕೋಳಿ ಮಾರಾಟಗಾರರ ಯಡವಟ್ಟಿನಿಂದಾಗಿ ಇದರಲ್ಲಿ ಹುಳ ಪತ್ತೆಯಾಗಿದೆ ಎಂದು ವಿವಾದವನ್ನು ಮುಗಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
Follow us on Social media