ಮುಂಬೈ : ನಟಿ ಉರ್ಫಿ ಜಾವೇದ್‌ಗೆ ಬಟ್ಟೆಗಳ ಕ್ರೇಜ್ ತುಸು ಹೆಚ್ಚೇ.. ಚಿತ್ರ ವಿಚಿತ್ರ ಕಾಸ್ಟ್ಯೂಮ್ ಧರಿಸೋದ್ರಲ್ಲಿ ಅವರು ಇತರ ನಟಿಯರಿಗಿಂತ ಒಂದು ಹೆಜ್ಜೆ ಮುಂದೆ. ಅಂದ ಹಾಗೆ ಇತ್ತೀಚೆಗೆ ಅವರು ಧರಿಸಿದ ಬಿಕಿನಿಯೊಂದು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಅಷ್ಟಕ್ಕೂ ಅದರಲ್ಲೇನು ವಿಶೇಷ ಅಂತೀರಾ? ವಿಶೇಷ ಇರುವುದು ಇಲ್ಲೇ.
ಉರ್ಫಿ ಇತ್ತೀಚೆಗೆ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅದೂ ಬಿಕಿನಿಯಲ್ಲಿ. ಆ ಬಿಕಿನಿಗೆ ಹೂವುಗಳನ್ನು ಅಂಟಿಸಿಕೊಂಡಿದ್ದಾರೆ. ಸುತ್ತಲೂ ಹೂವುಗಳನ್ನು ಅಂಟಿಸಿಕೊಂಡಿರುವುದನ್ನು ತತ್‌ಕ್ಷಣಕ್ಕೆ ನೋಡುವಾಗ ಬಿಕಿನಿಯಲ್ಲಿ ಆರ್ಟಿಫೀಶಿಯಲ್ ಹೂವುಗಳನ್ನು ಅಂತಿಸಲಾಗಿದೆ ಎಂದೇ ಕಾಣುತ್ತದೆ. ಆದರೆ ಅದು ಆರ್ಟಿಫೀಶಿಯಲ್ ಅಲ್ಲ. ಬದಲಾಗಿ ನಿಜವಾದ ಹೂವುಗಳನ್ನು ಅವರು ತಮ್ಮಿ ಇಡೀ ಬಿಕಿನಿ ಧಿರಿಸಿಗೆ ಅಂಟಿಸಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗಿದ್ದು, ಉರ್ಫಿಯ ಹೊಸ ಅವತಾರ ಕಂಡು ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಪುಷ್ಪ ಸಿನೆಮಾದಲ್ಲಿ ಪುಷ್ಪ ಎಂದರೆ ಫ್ಲವರ್ ಅಂದುಕೊಂಡ್ಯಾ? ಫೈರ್..! ಎಂದ ಅಲ್ಲು ಅರ್ಜುನ್ ಡೈಲಾಗ್‌ನ್ನೇ ಕೆಲವು ನೆಟ್ಟಿಗರು ಈ ಫೋಟೋಕ್ಕೂ ಕಮೆಂಟ್ ಹಾಕುತ್ತಿದ್ದಾರೆ. ಬಿಕಿನಿಗೆ ಫ್ಲವರ್ ಅಂಟಿಸಿಕೊಂಡು ಬಂದ ಉರ್ಫಿಯ ಹೊಸ ಅವತಾರ, ಅವರ ಮಾದಕತೆ ಕೇವಲ ಫ್ಲವರ್ ಅಲ್ಲ, ಫೈರ್‌ನಂತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
Follow us on Social media