ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನ ನೋವು ಮಾಸುವ ಮುನ್ನವೇ ಕಿರುತೆರೆ ಕ್ಷೇತ್ರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ, ನಟ ಸಮೀರ್ ಶರ್ಮಾ ಮುಂಬೈ ಉಪನಗರ ನಿವಾಸದಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ.
ಸಮೀರ್ ಶರ್ಮ ಅವರಿಗೆ 44 ವರ್ಷ ವಯಸ್ಸಾಗಿತ್ತು. ಧಾರಾವಾಹಿಗಳಲ್ಲಿ ವಿವಿಧ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದರು. “ಕ್ಯೂಂಕಿ ಸಾಸ್ ಭಿ ಕಭಿ ಬಹು ತಿ, “,”ಕಹಾನಿ ಘರ್ ಘರ್ ಕಿ “ಮತ್ತು” “ಯೆ ರಿಶ್ತೆ ಹೈ ಪ್ಯಾರ್ ಕೆ” ಮೊದಲಾದ ಧಾರಾವಾಹಿಗಳಲ್ಲಿ ಪಾತ್ರಗಳಿಂದ ಅವರು ಜನಪ್ರಿಯತೆ ಗಳಿಸಿದ್ದರು.
ಶರ್ಮಾ ಸೀಲಿಂಗ್ ಫ್ಯಾನ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಸ್ಥಳಕ್ಕೆ ಬಂದ ಪೊಲೀಸರಿಗೆ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ ಎಂದು ಮಲಾಡ್ ಪೊಲೀಸರು ತಿಳಿಸಿದ್ದಾರೆ.
Follow us on Social media