ಮುಂಬೈ: ಭಾರತದ ಪ್ರಮುಖ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ಇಂಡಿಯಾ ಶುಕ್ರವಾರ ಬಿಎಸ್- 6 ಮಾನದಂಡಗಳನ್ನು ಪೂರೈಸುವ ಸೆಲೆರಿಯೊ ಶ‍್ರೇಣಿಯ ಎಸ್-ಸಿಎನ್‌ಜಿ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಮೂಲತಃ ಆಟೋ ಎಕ್ಸ್‌ಪೋ 2020 ರಲ್ಲಿ ಘೋಷಿಸಲಾದ ಕಂಪನಿಯ ಮಿಷನ್ ಗ್ರೀನ್ ಮಿಲಿಯನ್ ದೃಷ್ಟಿಗೆ ಅನುಗುಣವಾಗಿದೆ.
‘ಸೆಲೆರಿಯೊ ನಗರ ಚಾಲನೆಗೆ ಸೂಕ್ತವಾದ ಕಾರು ಎಂಬ ಕಾರಣಕ್ಕಾಗಿ ನಮ್ಮ ಗ್ರಾಹಕರ ಆಕರ್ಷಣೆಯಾಗಿದೆ. ಚಾಲನೆ ಮಾಡಲು ಸುಲಭವಾಗಿದ್ದು, ನಗರ ಪ್ರದೇಶಗಳಲ್ಲಿ ಯುವ ದಂಪತಿಗಳಲ್ಲಿ ಜನಪ್ರಿಯವಾಗಿದೆ. ಕಾರಿನ ಆರಾಮದಾಯಕ ಸವಾರಿ, ಸುಲಭ ಕುಶಲತೆ ಮತ್ತು ಅತ್ಯುತ್ತಮ ಇಂಧನ ದಕ್ಷತೆಯಿಂದಾಗಿ ಗ್ರಾಹಕರ ಮೆಚ್ಚುಗೆ ಪಡೆದಿದೆ.
ಎರಡು ಪೆಡಲ್ ತಂತ್ರಜ್ಞಾನದ ಪ್ರವರ್ತಕ ಕಂಪೆನಿಯಾಗಿ ಭಾರತದಲ್ಲಿ ಆಟೋ ಗೇರ್ ಶಿಫ್ಟ್ ತಂತ್ರಜ್ಞಾನವನ್ನು ಪರಿಚಯಿಸಿದ ಮೊದಲ ಕಾರು ಸೆಲೆರಿಯೊ ಆಗಿದ್ದು, ಇದರ ಬೆಲೆ 5.36 ಲಕ್ಷ ರೂ. ಆಗಿದೆ. 5 ಲಕ್ಷಕ್ಕೂ ಹೆಚ್ಚು ಗ್ರಾಹಕರು ಸೆಲೆರಿಯೊವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ (ಮಾರುಕಟ್ಟೆ ಮತ್ತು ವ್ಯಾಪಾರ) ಶ್ರೀ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.
Follow us on Social media