ಬೆಂಗಳೂರು : ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಆರು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿ, 23 ಲಕ್ಷ ರೂ ಮೌಲ್ಯದ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡಿದ್ದಾರೆ.
ಇಂದಿರಾನಗರ ಹಾಗೂ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಕಡೆ ಸಿಸಿಬಿ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.
ಆಂಧ್ರಪ್ರದೇಶದ ಮೂಲದ ಸವರ ಕವಿತಾ (23), ಕಿಲ್ಲೊ ಧನುರ್ಜೈ (25), ಪಂಗಿ ಮಾತ್ಯರಾಜು (26), ಉಪ್ಪಲಪಟ್ಟಿ ಸುಬ್ಬಾರೆಡ್ಡಿ (42), ಗೌರವ್ (25), ಮಹ್ಮದ್ ಅಮ್ಮರ್ ಶಂಷಾದ್ (22) ಬಂಧಿತ ಆರೋಪಿಗಳು.
Source : UNI
Follow us on Social media