ಮುಂಬೈ : ಏಕನಾಥ್ ಶಿಂಧೆ ಇಂದು ಸಂಜೆ 7:30ಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
- ನಿನ್ನೆ ಸುಪ್ರೀಂ ಕೋರ್ಟ್ ಇಂದು ವಿಶ್ವಾಸಮತಯಾಚನೆಗೆ ಸೂಚಿಸಿದ ಕಾರಣ, ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆಯವರು ರಾಜೀನಾಮೆ ನೀಡಿದ್ದರು. ವಿಶ್ವಾಸಮತ ಯಾಚನೆಗೂ ಮುನ್ನವೇ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಈ ಬೆನ್ನಲ್ಲೇ ಬಿಜೆಪಿಯಿಂದ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಚುರುಕಿನ ಪ್ರಕ್ರಿಯೆ ನೆಡೆದಿತ್ತು.ಇನ್ನು ಇದೀಗ ಇಂದು ಸಂಜೆ 7:30ಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.