ಉಡುಪಿ: ಇನ್ನು ಮುಂದೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರನ್ನೆಲ್ಲ ಅವರವರ ಮನೆಯಲ್ಲೇ 14 ದಿನ ಕ್ವಾರಂಟೈನ್, ಸೀಲ್’ಡೌನ್ ಮಾಡಲಾಗುವುದು. ಈ ಅವಧಿಯಲ್ಲಿ ಅವರಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದರೆ ಮಾತ್ರ ಅವರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗುವುದು. ಅದಕ್ಕಾಗಿ ಸರ್ಕಾರ ಮಾರಗದರ್ಶಿ ಸೂತ್ರಗಳನ್ನು ಬದಲಾಯಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಕೊರೋನಾ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೂವರೆಗೆ ಮಹಾರಾಷ್ಟ್ರದಿಂದ ಬಂದವನ್ನು ಸರ್ಕಾರಿ ಕ್ವಾರಂಟೈನ್ ನಲ್ಲಿಟ್ಟು ಪ್ರತಿಯೊಬ್ಬರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿತ್ತು. ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಕನ್ನಡಿಗರು ಹಿಂದಕ್ಕೆ ಬರಲಿದ್ದಾರೆ. ಇದರಿಂದ ಕೊರೋನಾ ಪೀಡಿತರ ಸಂಖಅಯೆ ಹೆಚ್ಚಾಗಲಿದೆ. ಆದ್ದರಿಂದ ಸರ್ಕಾರ ಯಾವುದೇ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಸಿದ್ಧವಿಲ್ಲ. ಆದ್ದರಿಂದ ಅವರನ್ನು ಮನೆಯಲ್ಲಿಯೇ ಸೀಲ್’ಡೌನ್ ಮಾಡಲಾಗುವುದು. ಅವರು ಮನೆಯಿಂದ ಹೊರಗೆ ಬಂದರೆ ಅವರ ಮೇಲೆ ಕೇಸು ದಾಖಲಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ.
ಕೊರೋನಾ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಖಾಸಗಿ ಆಸ್ಪತ್ರೆಯವರು ಸರ್ಕಾರದಿಂದ ಚಿಕಿತ್ಸೆಯ ಹಣ ಪಡೆಯುವುದಕ್ಕಾಗಿ ಕೊರೋನಾ ಇಲ್ಲದವರಿಗೂ ಇದೆ ಎಂದು ಹೇಳುವುದಾಗಲಿ ಅಥವಾ ಕೊರೋನಾ ರೋಗಿಗಳಿಂದ ಚಿಕಿತ್ಸೆಗೆ ಹಣ ಪಡೆಯುವುದಾಗಲಿ ಕಂಡು ಬಂದರೆ ಅಂತಹ ಆಸ್ಪತ್ರೆಗಳ ಮೇಲೆ ಕ್ರಿಮಿನಲ್ ಕೇಶು ದಾಖಲಿಸಲಾಗುತ್ತದೆ ಎಂದು ಆರೋಗ್ಯ ಸಚಿವರು ಎಚ್ಚರಿಕೆ ನೀಡಿದರು.
Follow us on Social media