ಬೆಂಗಳೂರು : ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರ ಕ್ವಾರಂಟೈನ್ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರ ಮತ್ತೆ ನಿಯಮ ಬದಲಾಯಿಸಿದೆ. ಕಳೆದವಾರ ಮಹಾರಾಷ್ಟ್ರ ಸೇರಿದಂತೆ ದೇಶದ ಯಾವುದೇ ರಾಜ್ಯಗಳಿಂದ ಬರುವವರು ರೋಗ ಲಕ್ಷಣಗಳಿಲ್ಲದಿದ್ದಲ್ಲಿ 14 ದಿನ ಹೋಂಕ್ವಾರಂಟೈನ್ ಗೆ ಒಳಗಾಗಲಿದ್ದಾರೆ ಎಂದು ಹೊರಡಿಸಿದ್ದ ನಿಯಮವನ್ನು ಇದೀಗ ಬದಲಾಯಿಸಲಾಗಿದೆ.
ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಹೊಸ ಕ್ವಾರಂಟೈನ್ ನಿಯಮಗಳನ್ನು ಜಾರಿಗೆ ತರಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸುವವರಿಗೆ 7 ದಿನಗಳ ಹಾಗೂ ದೆಹಲಿ, ತಮಿಳುನಾಡಿನಿಂದ ಆಗಮಿಸುವವರಿಗೆ 3 ದಿನಗಳ ಸಾಂಸ್ಥಿಕ ಕ್ವಾರಂಟೈನ್ ವಿಧಿಸುವ ಘೋಷಣೆಯಾಗಿದೆ. ಅಲ್ಲದೆ, ಸೇವಾ ಸಿಂಧುವಿನಲ್ಲಿ ಈ ಹಿಂದೆ ಇದ್ದಂತಹ ಆದೇಶವನ್ನೇ ಮುಂದುವರೆಸಲಾಗಿದೆ. ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ನಿಯಮವನ್ನು ಸರಕಾರ ಮತ್ತೊಮ್ಮೆ ಪರಿಶೀಲನೆ ಮಾಡಿದೆ. ಜೂನ್ 3ರಂದು ಹೊರಡಿಸಿದ್ದ ಆದೇಶವನ್ನು ಇದೀಗ ತಿದ್ದುಪಡಿಗೊಳಿಸಿದೆ.
- ಕ್ವಾರಂಟೈನ್ ನಿಯಮಗಳೇನು?
- ಮಹಾರಾಷ್ಟ್ರದಿಂದ ಆಗಮಿಸುವವರಿಗೆ 7ದಿನಗಳ ಸಾಂಸ್ಥಿಕ ಕ್ವಾರಂಟೈನ್
ಬಳಿಕ 7 ದಿನಗಳ ಕಾಲ ಹೋಂ ಕ್ವಾರಂಟೈನ್
ದೆಹಲಿ, ತಮಿಳುನಾಡಿನಿಂದ 3 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್
ಬಳಿಕ 11 ದಿನಗಳ ಕಾಲ ಹೋಂ ಕ್ವಾರಂಟೈನ್
ಇತರ ರಾಜ್ಯಗಳಿಂದ ಆಗಮಿಸುವವರಿಗೆ 14 ದಿನಗಳ ಹೋಂ ಕ್ವಾರಂಟೈನ್
ಸೇವಾ ಸಿಂಧುವಿನಲ್ಲಿ ನೋಂದಣಿ ಕಡ್ಡಾಯ:
ಹೊರರಾಜ್ಯದಿಂದ ಆಗಮಿಸುವವರಿಗೆ ಸೇವಾ ಸಿಂಧುವಿನಲ್ಲಿ ನೋಂದಣಿ ಕಡ್ಡಾಯ
ಸೇವಾ ಸಿಂಧುವಿನಲ್ಲಿ ಸಂಪೂರ್ಣ ವಿವರ, ಪೋನ್ ನಂಬರ್ ನೀಡತಕ್ಕದ್ದು
ಪ್ರಯಾಣಿಕರು ಆಗಮಿಸುವ ಪ್ರದೇಶದ ಸಂಪೂರ್ಣ ವಿವರ ಕಡ್ಡಾಯ
ಟ್ರಾನ್ಸ್ ಪೋರ್ಟ್ ಕಂಪೆನಿಯವರು ಕಡ್ಡಾಯವಾಗಿ ಸೇವಾ ಸಿಂಧು ವಿವರ ಪರಿಶೀಲನೆ ನಡೆಸಬೇಕು
ಪ್ರಯಾಣಿಕರು ಸೇವಾ ಸಿಂಧುವಿನಲ್ಲಿ ನೋಂದಾಯಿಸಿದ ವಿವರ ಪರಿಶೀಲಿಸತಕ್ಕದ್ದು
ವಿಮಾನಯಾನ, ರೈಲ್ವೇ, ಬಸ್ ಗಳಿಗೆ ಸಂಬಂಧಿಸಿದ ಕಂಪೆನಿಗಳು ಪರಿಶೀಲಿಸತಕ್ಕದ್ದು
ಕ್ವಾರಂಟೈನ್ ನಿಯಮ ಉಲ್ಲಂಘನೆ, ಸೇವಾ ಸಿಂಧುವಿನಲ್ಲಿ ತಪ್ಪು ಮಾಹಿತಿ ನೀಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ. ವಿಜಯ್ ಭಾಸ್ಕರ್ ನೀಡಿದ್ದಾರೆ.
Follow us on Social media