ನವದೆಹಲಿ: ಒಂದೆಡೆ ದೇಶದಲ್ಲಿ ಲಾಕ್’ಡೌನ್ ಸಡಿಲಿಸಲು ಸಿದ್ಧತೆಗಳು ಆರಂಭವಾಗಿರುವಾಗಲೇ ಕೊರೋನಾ ವೈರಸ್ ಪ್ರಕರಣಗಳು ಶುಕ್ರವಾರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಒಂದೇ ದಿನ 1008 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಪ್ರತೀನಿತ್ಯ ಏರಿಕೆಯಾಗುತ್ತಲೇ ಇದ್ದು, ಇದೀಗ ಆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,506ಕ್ಕೆ ಏರಿಕೆಯಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಒಂದೇ ದಿನ 26 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 485ಕ್ಕೆ ಏರಿಕೆಯಾಗಿದೆ.
ಈ ನಡುವೆ ನಿನ್ನೆ 106 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದರಂತೆ ಒಟ್ಟು ಗುಣಮುಖರಾಗಿರುವವರ ಸಂಖ್ಯೆ 1,879ಕ್ಕೆ ಏರಿಕೆಯಾಗಿದೆ.
Follow us on Social media