ಮಲ್ಪೆ : ಸಾಲ ಮಾಡಿ ಮೀನುಗಾರಿಕಾ ಬೋಟ್ ಖರೀದಿಸಿದ್ದ ಯುವಕನೋರ್ವ ಮೀನುಗಾರಿಕೆಯಲ್ಲಿ ವಿಪರೀತ ನಷ್ಟಕ್ಕೆ ನೊಂದು ತನ್ನ ಬೋಟ್‌ನಲ್ಲೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಮೃತ ಯುವಕನನ್ನು ಬಡನಿಡಿಯೂರಿನ ಬೈಲಕೆರೆಯ ಪಾವಂಜಿಗುಡ್ಡೆ ನಿವಾಸಿ ಭಾಗ್ಯರಾಜ್ (27) ಎಂದು ಗುರುತಿಸಲಾಗಿದೆ. ಇವರು ಉತ್ತಮ ಕಬಡ್ಡಿ ಪಟುವಾಗಿದ್ದರು.
ತನ್ನ ತಂದೆಯು ಎರಡು ಬೋಟ್ ನಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಭಾಗ್ಯರಾಜ್ ಇತ್ತೀಚೆಗೆ ಸಾಲ ಮಾಡಿ ಮನೆ ಕಟ್ಟಿದ್ದಲ್ಲದೇ , ಮೀನುಗಾರಿಕಾ ಬೋಟ್‌ನ್ನು ಖರೀದಿಸಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ವ್ಯವಹಾರದಲ್ಲಿ ತೀರ ನಷ್ಟ ಹಾಗೂ ಮೀನುಗಾರಿಕೆಯಲ್ಲಿ ಕ್ಷಾಮ ಉಂಟಾದ ಹಿನ್ನೆಲೆ, ಸಾಲದ ಸುಳಿಗೆ ಸಿಲುಕಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಬೋಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ .
ಸ್ಥಳಕ್ಕೆ ಮಲ್ಪೆ ಠಾಣಾ ಪೊಲೀಸರು ಭೇಟಿ ಕೊಟ್ಟಿದ್ದಾರೆ.
Follow us on Social media