ಶಿವಮೊಗ್ಗ : ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಾಗರದ ರಾಷ್ಟ್ರೀಯ ಹೆದ್ದಾರಿ ಕಾಸ್ಪಾಡಿ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ರಾಯಚೂರು ಜಿಲ್ಲೆಯ ಶಕ್ತಿನಗರದ ಆರ್ ಟಿಪಿಎಸ್ ಉದ್ಯೋಗಿಗಳಾದ 40 ವರ್ಷದ ಸಿದ್ದಪ್ಪ, ವೆಂಕಟೇಶ್(55), ಜಿ ತಿಪ್ಪಣ್ಣ (60)ಮೃತರು.
ಘಟನೆಯಲ್ಲಿ ನಾಗರಾಜ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.