ಮಂಗಳೂರು: ಯುವತಿಯೊಬ್ಬಳು ತನ್ನ ಮನೆಯಂಗಳದಲ್ಲಿ ಕ್ರಿಕೆಟ್ ಆಡುವಾಗ ಮಾಡಿದ್ದ ಕವರ್ ಡ್ರೈವ್ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಯುವತಿಯ ಈ ಕವರ್ ಡ್ರೈವ್ ದೃಶ್ಯವನ್ನು ಅಂತಾರಾಷ್ಟ್ರೀಯ ಮಾಧ್ಯಮ ಕ್ರಿಕ್ ಇನ್‍ಫೋ ತನ್ನ ಟ್ವಿಟ್ಟರ್ ಪುಟದಲ್ಲಿ ಪ್ರಕಟಿಸಿದೆ. ಯುವತಿಯ ಈ ಶಾಟ್ ಗೆ ಕ್ರಿಕೆಟ್ ಪ್ರೇಮಿಗಳಿಂದ ಅಪಾರ ಮೆಚ್ಚುಗೆ ಬಂದಿದೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಯುವತಿ ಜ್ಯೋತಿ ಪೂಜಾರಿ. ಹೀಗೆ ಕವರ್ ಡ್ರೈವ್ ಶಾಟ್ ಮೂಲಕ ಖ್ಯಾತಿ ಗಳಿಸಿದ ಯುವತಿಯಾಗಿದ್ದಾಳೆ. ಮುಂಬೈ ನಲ್ಲಿ ವಾಸವಿದ್ದ ಜ್ಯೋತಿ ಪ್ರಸ್ತುತ ಕೊರೋನಾವೈರಸ್ ಕಾರಣದ ಲಾಕ್ ಡೌನ್ ಪರಿಣಾಮ ತನ್ನ ಊರಿಗೆ ಬಂದಿದ್ದಳು. . ಎರಡು ದಿನಗಳ ಹಿಂದೆ ಆಕೆ ತನ್ನ ಮನೆಯ ಅಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದಳು, ಅದನ್ನು ರಂಜಿತ್ ಪೂಜಾರಿ ಎಂಬಾತ ಇದನ್ನು ರೆಕಾರ್ಡ್ ಮಾಡಿ ತಮ್ಮ ಫೇಸ್‌ಬುಕ್ ಖಾತೆಗೆ ಅಪ್‌ಲೋಡ್ ಮಾಡಿದ್ದರು.
ಈ ಕ್ರಿಕೆಟ್ ದೃಶ್ಯವನ್ನು ಗಮನಿಸಿದ್ದ ESPNcricinfo ಈ ಸೊಗಸಾದ ಶಾಟ್ ಅನ್ನು ತನ್ನ ಟ್ವಿಟ್ಟರ್ ಪುಟದಲ್ಲಿ ಪೋಸ್ಟ್ ಮಾಡಿದೆ.’ಲೆಗ್ ಸೈಡ್ ಗೆ ಹೆಜ್ಜಿ ಇಟ್ತು ಅದನ್ನು ಕವರ್ ಡ್ರೈವ್ ಮೂಲಕ ಹೊಡೆಯುವುದು ಅಪೂರ್ವ’ ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ. ಇದಲ್ಲದೆ ಈ ಹಿಂದೆ ಇಂತಹದ್ದೇನಾದರೂ ನೀವು ಕಂಡಿದ್ದೀರಾ ಎಂದೂ ವೀಕ್ಷಕರನ್ನು ಪ್ರಶ್ನಿಸಲಾಗಿದೆ. ವೀಡಿಯೊದಲ್ಲಿರುವ ಯುವತಿ ವೃತ್ತಿಪರ ಆಟಗಾರರಂತೆ ಕವರ್ ಡ್ರೈವ್ ಮಾಡಿದ್ದು ಶಾಟ್ ಸೊಗಸಾಗಿ ಪೂರ್ಣಗೊಂಡಿದೆ.
Follow us on Social media