ಸಿದ್ಧಿ: ಫೆಬ್ರವರಿ 16ರಿಂದ ಮಧ್ಯಪ್ರದೇಶದ ಸಿದ್ಧಿ ಬಳಿಯ ಕಾಲುವೆಗೆ ಬಸ್ ವೊಂದು ಉರುಳಿಬಿದ್ದು ದೊಡ್ಡ ಅನಾಹುತ ಸಂಭವಿಸಿತ್ತು.
ಚಾಲಕ ಸೇರಿದಂತೆ 61 ಮಂದಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಬಸ್ ಚಾಲನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿತ್ತು. ಬಸ್ ದುರಂತದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು.
ಆದರೆ ಬದುಕುಳಿದಿರಬಹುದು ಎಂಬ ಆಶಾಭಾವದ ಮೇಲೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಸಿಬ್ಬಂದಿಗೆ ನಿರಾಶೆಯಾಗಿದ್ದು ಕಣ್ಮರೆಯಾಗಿದ್ದ 54ನೇ ಪ್ರಯಾಣಿಕ ಅರವಿಂದ್ ವಿಶ್ವಕರ್ಮರ ಮೃತದೇಹ ಅಪಘಾತ ಸಂಭವಿಸಿದ ಜಾಗದಿಂದ ಸುಮಾರು 30 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.
32 ಪ್ರಯಾಣಿಕರ ಸಾಮರ್ಥ್ಯದ ಬಸ್ ನಲ್ಲಿ 61 ಮಂದಿಯನ್ನು ಕರೆದೊಯ್ಯಲಾಗುತ್ತಿತ್ತು. ಸದ್ಯ ಬಸ್ ದುರಂತದಲ್ಲಿ 54 ಮಂದಿ ಮೃತಪಟ್ಟಿದ್ದು ಏಳು ಮಂದಿ ಬದುಕುಳಿದಿದ್ದಾರೆ.
Follow us on Social media