ಮಧ್ಯಪ್ರದೇಶ : ಆಂಬ್ಯುಲೆನ್ಸ್ ನೀಡದ ಕಾರಣ 4 ವರ್ಷದ ಬಾಲಕಿಯ ಮೃತದೇಹವನ್ನು ತಂದೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ನಾಲ್ಕು ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆಕೆಯ ಮೃತದೇಹವನ್ನು ತನ್ನ ಗ್ರಾಮಕ್ಕೆ ತೆಗೆದುಕೊಂಡು ಹೋಗಲು ಆಯಂಬುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಮೃತ ಬಾಲಕಿಯ ತಂದೆ ಆಕೆಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ.ಸೋಮವಾರ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಆಕೆಯನ್ನು ಬಕ್ಸ್‌ವಾಹಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯದಿದ್ದು, ಅಲ್ಲಿಂದ ಮಂಗಳವಾರ ಆಕೆಯ ಮನೆಯವರು ಆಕೆಯನ್ನು ಪಕ್ಕದ ದಮೋಹ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅದೇ ದಿನ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.ಇನ್ನು ಆಕೆಯ ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಆಸ್ಪತ್ರೆಯ ಸಿಬ್ಬಂದಿ ಬಳಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಕೇಳಿದರೂ ಅದಕ್ಕೆ ನಿರಾಕರಿದ್ದು, ಖಾಸಗಿ ವಾಹನ ವ್ಯವಸ್ಥೆ ಮಾಡಲು ನಮ್ಮ ಬಳಿ ಹಣವಿಲ್ಲದ ಕಾರಣ ನಾವು ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಹೆಗಲ ಮೇಲೆ ಹಾಕಿಕೊಂಡು ಬಕ್ಸ್ವಾಹಾಗೆ ಬಸ್ನಲ್ಲೇ ತೆಗೆದುಕೊಂಡು ಹೋಗಿದ್ದೇವೆ ಎಂದು ಬಾಲಕಿಯ ಅಜ್ಜ ಮನ್ಸುಖ್ ಅಹಿರ್ವಾರ್ ಆರೋಪಿಸಿದ್ದಾರೆ.
ಈ ಆರೋಪವನ್ನು ದಾಮೋಹ್ ಸಿವಿಲ್ ಸರ್ಜನ್ ಡಾ. ಮಮತಾ ತಿಮೋರಿ ನಿರಾಕರಿಸಿದ್ದು, ಯಾರೂ ನನ್ನ ಬಳಿಗೆ ಬಂದಿಲ್ಲ, ನಮ್ಮ ಬಳಿ ಶವದ ವಾಹನವಿದೆ. ನಾವು ಅದನ್ನು ರೆಡ್‌ಕ್ರಾಸ್ ಅಥವಾ ಯಾವುದೇ ಇತರ ಎನ್‌ಜಿಒನಿಂದ ವ್ಯವಸ್ಥೆಗೊಳಿಸುತ್ತಿದ್ದೆವು. ಆದರೆ ನಮಗೆ ಈ ಘಟನೆಯ ಬಗ್ಗೆ ಮಾಹಿತಿಯೇ ಸಿಕ್ಕಿಲ್ಲ ಎಂದಿದ್ದಾರೆ.
Follow us on Social media