ನಾಗರಕರ್ನೂಲ್ : ತನ್ನ ಮಗುವಿಗೆ ಹಾಲುಣಿಸುತ್ತಿರುವಾಗಲೇ ತಾಯಿಯೋರ್ವಳು ಮೃತಪಟ್ಟಿರುವ ದಾರುಣ ಘಟನೆಯೊಂದು ನಾಗರಕರ್ನೂಲ್ ಜಿಲ್ಲೆಯ ತಿಮ್ಮರಾಜ ಮಂಡಲ್ ನ ನೆರೆಲ್ಲಪಲ್ಲಿಯಲ್ಲಿ ನಡೆದಿದೆ.
- ರಾಜಾಪುರ ಮಂಡಲದ ತಿರುಮಲಾಪುರ ಗ್ರಾಮದ 25 ವರ್ಷದ ಜಯಶ್ರೀ ತಮ್ಮ ಮೊದಲ ಮಗುವಿನ ಹೆರಿಗೆ ಬಳಿಕ ತಾಯಿ ಮನೆಗೆ ಬಂದಿದ್ದರು. ಇವರು 2 ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಯ ಪತಿ ಪ್ರಶಾಂತ್ ಶನಿವಾರ ತಿರ್ಮಲಾಪುರದಿಂದ ಬಂದಿದ್ದು ಪತ್ನಿ ಏಕಾಏಕಿ ಕಪ್ಪಾಗಿದ್ದರಿಂದ ಮಹಬೂಬನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಹೃದಯನಾಳದಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಔಷಧದಿಂದ ಗುಣವಾಗುತ್ತದೆ ಎಂದು ಹೇಳಿದ್ದಾರೆ. ವೈದ್ಯರು ಹೇಳಿದ ಔಷಧಗಳನ್ನು ಸೇವಿಸಿ ಬಳಿಕ ಅವರನ್ನು ಮರಳಿ ನೆರೆಲ್ಲಪಲ್ಲಿಗೆ ಕರೆದುಕೊಂಡು ಬರಲಾಗಿತ್ತು.ಆದರೆ ಭಾನುವಾರ ಬೆಳಗ್ಗೆ 5.30ರ ಸುಮಾರಿಗೆ ಜಯಶ್ರೀ ಮಗುವಿಗೆ ಮೊಲೆ ಹಾಲು ಕುಡಿಸುತ್ತಲೇ ಹೃದಯಾಘಾತ ಕಾಣಿಸಿಕೊಂಡು ನಿಧನರಾಗಿದ್ದಾರೆ. ಅಜ್ಜ, ಅಜ್ಜಿ ಆಕೆಯನ್ನು ಟೀ ಕುಡಿಯಲು ಕೂಗಿದರೂ ಉತ್ತರಿಸದಿದ್ದಾಗ, ಹೋಗಿ ನೋಡಿದರೆ ಅವರಿಗೆ ಆಘಾತ ಕಾದಿತ್ತು. ಹಾಲು ಕುಡಿಸುತ್ತಲೇ ಜಯಶ್ರೀ ನಿಧನರಾಗಿದ್ದರು.