ಮಂಗಳೂರು : ದೇಶದ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಮಂಗಳೂರಿನ ಕಾರ್ನಾಡ್ ಎಂಬಲ್ಲಿ ದೊಡ್ಡ ಕ್ಯಾಂಪಸ್ ತೆರೆಯಲಿದೆ.
ಈ ವರ್ಷದ ಮಾರ್ಚ್ ನಿಂದ ಕರ್ನಾಟಕದಲ್ಲಿ 27,107.39 ಕೋಟಿ ರೂಪಾಯಿ ಮೌಲ್ಯದ ಬಂಡವಾಳ ಹರಿದು ಬಂದಿದ್ದು, ಈ ಯೋಜನೆಗಳಿಂದ ರಾಜ್ಯದಲ್ಲಿ 46 ಸಾವಿರ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಯಿದೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ತುಳುನಾಡಿನಲ್ಲಿ ಹೊಸ ಕಛೇರಿ ತೆರೆಯಲಿದ್ದು ಇದರಿಂದ 4500 ಉದ್ಯೋಗಗಳನ್ನು ಪಡೆಯಬಹುದು. ಇದು ನಿಜವಾಗಿಯೂ ಮಂಗಳೂರಿಗರಿಗೆ ಇದೊಂದು ಶುಭ ಸುದ್ದಿಯಾಗಿದ್ದು, ಅನೇಕರಿಗೆ ಉದ್ಯೋಗವಕಾಶಗಳು ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಟಿಸಿಎಸ್ ಕಚೇರಿ ಸುಮಾರು 38 ಎಕ್ರೆ ಜಾಗದಲ್ಲಿ ತನ್ನ ಕ್ಯಾಂಪಸ್ ತೆರೆಯಲಿದ್ದು, ಸಂಪೂರ್ಣವಾಗಿ ಕ್ಯಾಂಪಸ್ ಆರಂಭಗೊಂಡರೆ ಒಟ್ಟು 4 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ.
