ಮಂಗಳೂರು : ದುಬೈನಿಂದ 166 ಪ್ರಯಾಣಿಕರನ್ನು ಹೊತ್ತ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮೈ ಕಮ್ಯುನಿಟಿ ಫೌಂಡೇಶನ್ ನೇತೃತ್ವದಲ್ಲಿ ಫ್ಲೈ ದುಬೈ ಫ್ಲೈಟ್ ಎಫ್‌ಝಡ್ 4617 ವಿಮಾನವು ಜೂನ್ 23ರ ಮಂಗಳವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಮೊದಲು ಈ ವಿಮಾನದಲ್ಲಿ 187 ಪ್ರಯಾಣಿಕರನ್ನು ಕರೆತರಲು ನಿರ್ಧರಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ 21 ಪ್ರಯಾಣಿಕರನ್ನು ಬಿಟ್ಟು, 166 ಪ್ರಯಾಣಿಕರನ್ನು ಕರೆತರಲಾಯಿತು. ಪ್ರಯಾಣಿಕರ ಪೈಕಿ 128 ಪುರುಷರು ಹಾಗೂ 38 ಮಹಿಳೆಯರು ಇದ್ದರು.ವಿಮಾನವು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ದುಬೈ ವಿಮಾನ ನಿಲ್ದಾಣದ ಟರ್ಮಿನಲ್-2 ನಿಂದ ಹೊರಟಿದ್ದು, ಗರ್ಭಿಣಿಯರು, ಹಿರಿಯ ನಾಗರಿಕರು, ಕೆಲಸ ಕಳೆದುಕೊಂಡವರು ಈ ವಿಮಾನದಲ್ಲಿದ್ದರು. ದುಬೈಯಲ್ಲಿ ಮೈ ಕಮ್ಯೂನಿಟಿ ಫೌಂಡೇಶನ್ ಮುಖ್ಯಸ್ಥರಾದ ಅಶ್ರಫ್ ಅಬ್ಬಾಸ್, ಎಂ.ಫ್ರೆಂಡ್ಸ್ ಎನ್ನಾರೈ ಸದಸ್ಯರಾದ ಹನೀಫ್ ಪುತ್ತೂರು ಹಾಗೂ ನವಾಝ್ ಕಾನತ್ತಡ್ಕ ಬೀಳ್ಕೊಟ್ಟರು.
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ನೋಡಲ್ ಅಧಿಕಾರಿ ಯತೀಶ್ ಉಳ್ಳಾಲ್, ಎಂ.ಫ್ರೆಂಡ್ಸ್ ಸ್ಥಾಪಕರಾದ ರಶೀದ್ ವಿಟ್ಲ, ಜೊತೆ ಕಾರ್ಯದರ್ಶಿ ಹನೀಫ್ ಕುದ್ದುಪದವು, ಸದಸ್ಯರಾದ ತುಫೈಲ್ ಅಹ್ಮದ್, ಮಹಮ್ಮದ್ ಟೋಪ್ಕೋ, ಆಶಿಕ್ ಕುಕ್ಕಾಜೆ, ಸೌಹಾನ್ ಎಸ್.ಕೆ., ಅಶ್ಫಾಕ್ ವಿಲಾಯತ್, ಇಂತಿಯಾಝ್ ಐ ಫ್ರೇಮ್, ಸಿರಾಜ್ ಮದಕ ಮೊದಲಾದವರು ಬರಮಾಡಿಕೊಂಡರು.
Follow us on Social media