ಮಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ ಅಪರಿಚಿತ ಹಲ್ಲೆಕೋರರ ಗುಂಪು ಗುಂಡು ಹಾರಿಸಿದ್ದು ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಮಂಗಳೂರಿನ ಫಳ್ನೀರ್ ನಲ್ಲಿರುವ ಎಂಎಫ್‌ಸಿ ಹೋಟೆಲ್‌ನಲ್ಲಿ ನಡೆದಿದೆ.
ಗುಂಡಿನ ದಾಳಿಯಲ್ಲಿ ಹೋಟೆಲ್ ಸಿಬ್ಬಂದಿ್ ಸಾಹಿಲ್ ಹಾಗೂ ಸುರತ್ಕಲ್ ನಿವಾಸಿ ಸೈಫ್ ಗಾಯಗೊಂಡಿದ್ದಾರೆ.
ದಾಳಿಕೋರರು ಹೋಟೆಲ್ ಪೀಠೋಪಕರಣಗಳನ್ನು ಸಹ ನಾಶಪಡಿಸಿದ್ದು ಮತ್ತಿಬ್ಬರು ಸಿಬ್ಬಂದಿಗಳ ಮೇಲೂ ಹಲ್ಲೆ ಮಾಡಿದ್ದಾರೆ.
ಈ ಘಟನೆ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಘಟನೆಯಲ್ಲಿ ಭಾಗಿಯಾದವರೆನ್ನಲಾದ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.
ಘಟನೆ ವಿವರ
ಹೋಟೆಲ್ ಗೆ ಗ್ರಾಹಕರಂತೆ ಆಗಮಿಸಿದ ಅಪರಿಚಿತರು ಸಮೋಸಾ ಕೇಳಿದ್ದಾರೆ.ಈ ವೇಳೆ ಹೋಟೆಲ್ ಸಿಬ್ಬಂದಿ ಹಾಗೂ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಹೋಟೆಲ್ ನಿಂದ ಹೊರಬಂದ ವ್ಯಕ್ತಿಗಳು ತಮ್ಮ ಬಳಿ ಇದ್ದ ಪಿಸ್ತೂಲ್ ನಿಂದ ಶೂಟ್ ಮಾಡೀದ್ದಾರೆ.
ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Follow us on Social media