ಮಂಗಳೂರು : ನಗರದ ವೆನ್ಲಾಕ್ ಆಸ್ಪತ್ರೆಯ ಸಮೀಪದಲ್ಲಿರುವ ಶ್ರೀ ರಾಮ ಭವನ ಆಟೋ ನಿಲ್ದಾಣದಲ್ಲಿ ಮಧ್ಯ ವಯಸ್ಕ, ನಿರ್ಗತಿಕ ವ್ಯಕ್ತಿಯ ಮೃತ ದೇಹವೊಂದು ಪತ್ತೆಯಾಗಿದೆ.
ನಗರದಲ್ಲಿ ಹಲವರು ನಿರ್ಗತಿಕರು ಕೊರೊನಾದ ಈ ಸಂದರ್ಭದಲ್ಲಿ ಹಸಿವಿನಿಂದ ಬಳಲುತ್ತಿದ್ದು ಈ ವ್ಯಕ್ತಿಯು ಹಸಿವಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಆಟೋ ಚಾಲಕರೋರ್ವರು, ನಾವು ಆ ವ್ಯಕ್ತಿಯನ್ನು ನೋಡಿದಾಗ ಆಹಾರ ನೀಡುತ್ತಿದ್ದೆವು. ಆದರೆ ಈ ಲಾಕ್‌ಡೌನ್ ಸಂದರ್ಭದಲ್ಲಿ ಈ ವ್ಯಕ್ತಿ ಆಹಾರವಿಲ್ಲದೆ ಬಹಳಷ್ಟು ಕಷ್ಟಪಟ್ಟಿದ್ದಾರೆ. ಹಸಿವಿನಿಂದಾಗಿ ಶಕ್ತಿ ಕಳೆದುಕೊಂಡು ಈ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಹಲವಾರು ಕಡೆಗಳಲ್ಲಿ ನಿಗರ್ತಿಕರು, ವಲಸೆ ಕಾರ್ಮಿಕರು ಬೀದಿ ಬದಿಯಲ್ಲೇ ವಾಸಿಸುತ್ತಿದ್ದು ಆಹಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳೀಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕಾದ ಅಗತ್ಯವಿದೆ.
Follow us on Social media