ಮಂಗಳೂರು: ಮಂಗಳೂರು ನಗರ ಹೊರವಲಯದ ಸುರತ್ಕಲ್ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ಇಂದು ಮಧ್ಯಾಹ್ನ ಓಮ್ನಿ ಕಾರಿನ ಸರಕು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಓಮ್ನಿ ಚಾಲಕ ನನ್ನ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುವನ್ನು ಲೋಕೇಶ್ ಕುಲಾಲ್(38) ಎಂದು ಗುರುತಿಸಲಾಗಿದೆ.
ಅರ್ಧ ಗಂಟೆಯ ರಕ್ಷಣಾ ಕಾರ್ಯದ ನಂತರ ಚಾಲಕನನ್ನು ಹೊರತೆಗೆಯಲಾಗಿದೆ. ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
Follow us on Social media