ಮಂಗಳೂರು : ಶೀತ, ಕೆಮ್ಮು, ಜ್ವರ ಮಾರಾಟ ಮಾಡಿರುವ ಸಂಸ್ಥೆಗಳಾದ ಮೆ| ಗೋರಕ್ಷಾ ಮೆಡಿಕಲ್ಸ್, ಬಿಜೈ, ಮಂಗಳೂರು ಹಾಗೂ ಮೆ| ಮೆಡಿ ಫಾರ್ಮಾ, ಕಾಟಿಪಳ್ಳ, ಸುರತ್ಕಲ್ ಸಂಸ್ಥೆಗಳಿಗೆ ಔಷಧ ಇಲಾಖೆಯಿಂದ ನೋಟೀಸ್ ಹಾಗೂ ಉಸಿರಾಟದ ತೊಂದರೆಗೆ ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧಿಗಳನ್ನು ಪೂರೈಕೆ ಮಾಡುತ್ತಿರುವ ಕುರಿತು ಔಷಧ ನಿಯಂತ್ರಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.
ವೈದ್ಯರ ಸಲಹಾ ಚೀಟಿ ಇಲ್ಲದೇ ಶೀತ, ಜ್ವರ ಹಾಗೂ ಉಸಿರಾಟದ ತೊಂದರೆ ಇರುವವರಿಗೆ ಔಷಧ ಜಾರಿ ಮಾಡಲಾಗಿದೆ.ಈಗಾಗಲೇ ಎಲ್ಲಾ ಔಷಧ ಮಳಿಗೆಗಳಿಗೆ https://tinyurl.com/DrugControl-DK ಲಿಂಕ್ ಮುಖಾಂತರ ವೈದ್ಯರ ಸಲಹಾ ಚೀಟಿ ಮೇರೆಗೆ ಶೀತ, ಕೆಮ್ಮು ಹಾಗೂ ಉಸಿರಾಟದ ತೊಂದರೆಗೆ ಔಷಧಿಗಳನ್ನು ಮಾರಾಟ ಮಾಡಿದಲ್ಲಿ ಔಷಧ ಖರೀದಿದಾರರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಎಲ್ಲಾ ವಿವರಗಳನ್ನು ತಪ್ಪದೇ ಕಡ್ಡಾಯವಾಗಿ ಸಲ್ಲಿಸುವಂತೆ ಔಷಧ ನಿಯಂತ್ರಣ ಇಲಾಖೆ ತಿಳಿಸಿದೆ.
Follow us on Social media