ಮಂಗಳೂರು : ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜಾ ಹಾಗೂ ಅವರ ಪತ್ನಿ ಡಾ. ಕವಿತಾ ಅವರಿಗೆ ಕೊರೊನಾ ದೃಢಪಟ್ಟಿದೆ.
ಈ ಬಗ್ಗೆ ಸ್ವತಃ ಅವರೇ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದು, ”ನನಗೆ ಮತ್ತು ನನ್ನ ಪತ್ನಿ ಡಾ.ಕವಿತಾಗೆ ಕೊರಾನಾ ಪಾಸಿಟಿವ್ ಆಗಿದೆ. ಯಾವುದೇ ಲಕ್ಷಣಗಳು ಇಲ್ಲದಿದ್ದರೂ ನಾವು ಸ್ವಯಂಪ್ರೇರಣೆಯಿಂದ ಹೋಗಿ ಕೊರೊನಾ ಪರೀಕ್ಷೆಗೆ ಒಳಪಟ್ಟೆವು. ಯಾವುದೇ ಆತಂಕ ಪಡಬೇಕಾಗಿಲ್ಲ. ನಮ್ಮನ್ನು ಭೇಟಿ ಮಾಡದಂತೆ ನಮ್ಮ ಎಲ್ಲ ಸ್ನೇಹಿತರು ಮತ್ತು ಹಿತೈಷಿಗಳನ್ನು ನಾವು ವಿನಂತಿಸುತ್ತೇವೆ. ನಿಮ್ಮ ಪ್ರಾರ್ಥನೆ, ಆಶೀರ್ವಾದ ನಮ್ಮ ಶಕ್ತಿ” ಎಂದು ಹೇಳಿದ್ದಾರೆ.
