ಮಂಗಳೂರು : ವಿಪಕ್ಷ ಉಪನಾಯಕ ಹಾಗೂ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯು ಟಿ ಖಾದರ್ ಅವರ ಕಾರ್ ಬ್ರೇಕ್ ಫೈಲ್ ಆಗಿರುವ ಘಟನೆ ಶುಕ್ರವಾರ ಅಪರಾಹ್ನ ನಡೆದಿದೆ.
ಬಂಟ್ವಾಳ ಬಿ ಸಿ ರೋಡ್ ಕಡೆಯಿಂದ ಮಂಗಳೂರಿಗೆ ಬರುವಾಗ ಘಟನೆ ಸಂಭವಿಸಿದೆ.
ಪಡೀಲ್ ಬಳಿಯ ಕಣ್ಣೂರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಕಾರ್‌ನ ಬ್ರೇಕ್ ಫೈಲ್ ಆಗಿದ್ದು, ಚಾಲಕ ಲಿಬ್ಜತ್ ತಕ್ಷಣ ಕಾರ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಬದಲಿ ಕಾರ್‌ನಲ್ಲಿ ಯು ಟಿ. ಖಾದರ್ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅದೃಷ್ಟವಶತ್ ಶಾಸಕರು ಹಾಗೂ ಕಾರಲ್ಲಿದ್ದವರು ಏನೂ ಅಪಾಯವಾಗದೆ ಪಾರಾಗಿದ್ದಾರೆ.
Follow us on Social media