ಮಂಗಳೂರು : ವಿದ್ಯುತ್ ಪೂರೈಕೆ ಕಾಮಗಾರಿ ನಡೆಯಲಿರುವ ಹಿನ್ನಲೆಯಲ್ಲಿ ನಾಳೆ ನಗರದ ಹಲವು ಪ್ರದೇಶದಲ್ಲಿ ನೀರು ಸರಬರಾಜು ವ್ಯತ್ಯಯ ಉಂಟಾಗಲಿದೆ ಮಹಾನಗರ ಪಾಲಿಕೆ ತಿಳಿಸಿದೆ.
ಮಂಗಳೂರು ಮಹಾನರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಹೆಚ್.ಎಲ್.ಪಿ.ಎಸ್.-2 ಮತ್ತು ಎಲ್.ಎಲ್.ಪಿ.ಎಸ್.-2 ಸ್ಥಾವರಗಳಿಗೆ ವಿದ್ಯುತ್ ಪೂರೈಕೆ ಮಾಡುವ 33 ಕೆ.ವಿ ತಂತಿಗಳನ್ನು ಮೆಸ್ಕಾಂ ವತಿಯಿಂದ ಸ್ಥಳಾಂತರಿಸುವ ಕೆಲಸವನ್ನು ಮೇ 5 ರಂದು ಹಮ್ಮಿಕೊಂಡಿರುವುದರಿಂದ ಹೆಚ್.ಎಲ್.ಪಿ.ಎಸ್.-2 ಮತ್ತು ಎಲ್.ಎಲ್.ಪಿ.ಎಸ್.-2 ಸ್ಥಾವರಗಳಿಗೆ ವಿದ್ಯುತ್ ಪೂರೈಕೆ ನಿಲುಗಡೆಗೊಳ್ಳುವುದರಿಂದ ನೀರು ಸರಬರಾಜನ್ನು ಮೇ 5 ರಂದು ಬೆಳಿಗ್ಗೆ 8 ಗಂಟೆಯಿಂದ ಮೇ 6 ರಂದು ಬೆಳಿಗ್ಗೆ 8 ಗಂಟೆವರೆಗೆ 24 ಗಂಟೆ ಅವಧಿಯಲ್ಲಿ ಪಡೀಲ್ ಸ್ಥಾವರದಿಂದ ನೀರು ಪಡೆಯುವ ಪ್ರದೇಶಗಳಾದ ಬಜಾಲ್, ಪಡೀಲ್, ಶಕ್ತಿನಗರ, ಮಂಗಳಾದೇವಿ, ಪಾಂಡೇಶ್ವರ, ಕರಾವಳಿ ಸ್ಥಾವರ ಪ್ರದೇಶಗಳು ಕಣ್ಣೂರು, ಶಕ್ತಿನಗರ, ಬೋಂದೆಲ್ ಹಾಗೂ ಮರಕಡ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದು ಎಂದು ಮಹಾನಗರಪಾಲಿಕೆ ಪ್ರಕಟಣೆ ತಿಳಿಸಿದೆ
Follow us on Social media