ಮಂಗಳೂರು: ಬಿಜೆಪಿಯ ಹಿರಿಯ ಮುಖಂಡ ಮತ್ತು ಮಂಗಳಾದೇವಿ ವಾರ್ಡ್ ನ ಐದು ಬಾರಿಯ ಕಾರ್ಪೋರೇಟರ್ ಪ್ರೇಮಾನಂದ ಶೆಟ್ಟಿ ಮಂಗಳೂರಿನ 22 ನೇ ಮೇಯರ್ ಆಗಿ ಮಂಗಳವಾರ ಆಯ್ಕೆಯಾಗಿದ್ದಾರೆ. ಇದೇ ವೇಳೆ ಕುಂಜತ್ಬೈಲ್ ವಾರ್ಡ್ನ ಕೌನ್ಸಿಲರ್ ಸುಮಂಗಲ ರಾವ್ ಉಪ ಮೇಯರ್ ಆಗಿ ಆಯ್ಕೆಗೊಂಡಿದ್ದಾರೆ.
ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಸೇರಿದ್ದರೆ ಉಪ ಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿತ್ತು. ಪ್ರೇಮಾನಂದ ಶೆಟ್ಟಿ 46 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ನ ಅನಿಲ್ ಕುಮಾರ್ ಕೇವಲ 14 ಮತಗಳನ್ನು ಪಡೆದರು. ಇಬ್ಬರು ಕೌನ್ಸಿಲರ್ಗಳು ತಟಸ್ಥರಾಗಿದ್ದರು.
ಕಾಂಗ್ರೆಸ್ ನ ಅನಿಲ್ ಕುಮಾರ್ ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರೆ, ಜಸಿಂತಾ ಆಲ್ಫ್ರೆಡ್ ಉಪ ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಮೈಸೂರು ಪ್ರಾದೇಶಿಕ ಆಯುಕ್ತರಾದ ಡಾ.ಪ್ರಕಾಶ್ ಅವರು ಚುನಾವಣೆಯ ಸಮಯದಲ್ಲಿ ಚುನಾವಣಾ ಅಧಿಕಾರಿಯಾಗಿದ್ದರು. ಇದೇ ವೇಳೆ ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆಗಳೂ ನಡೆದವು.
Follow us on Social media