ಮೂಲ್ಕಿ : ದ.ಕ. ಜಿಲ್ಲೆಯಲ್ಲಿ ಹಾಡು ಹಗಲಲ್ಲೇ ಉದ್ಯಮಿಯ ಬರ್ಬರ ಹತ್ಯೆ ನಡೆದಿದೆ.
ಮಂಗಳೂರಿನ ಮೂಲ್ಕಿಯಲ್ಲಿ ದುಷ್ಕರ್ಮಿಗಳು ಯುವ ಉದ್ಯಮಿಯನ್ನು ಹತ್ಯೆಗೈದಿದ್ದಾರೆ.
ಮೂಡಬಿದ್ರೆಯಲ್ಲಿ ಉದ್ಯಮಿಯಾಗಿರುವ ಅಬ್ದುಲ್ ಲತೀಫ್(38) ಎಂಬವರು ಹತ್ಯೆಯಾದ ಉದ್ಯಮಿಯಾಗಿದ್ದಾರೆ. ತಲ್ವಾರ್ ಹಾಗೂ ಮಾರಾಕಾಸ್ತ್ರಗಳಿಂದ ಕೊಚ್ಚಿ ಉದ್ಯಮಿಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಬಳಿಕ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ ಮತ್ತು ಬೈಕ್ ನಲ್ಲಿ ಬಂದ ಎಂಟು ಮಂದಿ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಓಡಾಡುತ್ತಿರುವ ಸಂದರ್ಭದಲ್ಲೇ ಜನರೆದುರನಲ್ಲ ಭೀಭತ್ಸವಾಗಿ ದಾಳಿ ನಡೆದಿದೆ. ವೈಯಕ್ತಿಕ ದ್ವೇಷದಿಂದ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.