ಮಂಗಳೂರು : ಚೀನಾ ಟು ಲೆಬನಾನ್ ಹಡಗು ಮುಳುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಿನಿ ಜೆಟ್ ವಿಮಾನದ ಮೂಲಕ ಸಮುದ್ರದಲ್ಲಿ ಕಣ್ಗಾವಲು ಏರ್ಪಡಿಸಲಾಗಿದೆ. ಕೋಸ್ಟ್ ಗಾರ್ಡ್ ಗೆ ಸೇರಿದ ಮಿನಿ ಜೆಟ್ ವಿಮಾನದ ಮೂಲಕ ಹಡಗಿನ ಮಾನಿಟರ್ ಕಾರ್ಯ ನಡೆಯುತ್ತಿದೆ.ತೈಲ ಸೋರಿಕೆ ಸಾಧ್ಯತೆ ಹಿನ್ನೆಲೆ ಸಮುದ್ರದ ಸುತ್ತ ಜೆಟ್ ವಿಮಾನ ಸುತ್ತಾಟ ಮಾಡುತ್ತಿದೆ. ತೈಲ ಸೋರಿಕೆಯಾದ್ರೆ ತುರ್ತು ಪರಿಸ್ಥಿತಿ ಎದುರಿಸಲು ವಿಮಾನದ ಮೂಲಕ ಮಾನಿಟರ್ ಕಾರ್ಯ ಆರಂಭಗೊಂಡಿದೆ. ತೈಲ ಸೋರಿಕೆ ಕಂಡು ಬಂದರೆ ತಕ್ಷಣ ಕೋಸ್ಟ್ ಗಾರ್ಡ್ ಗೆ ಮಾಹಿತಿ ರವಾನೆ ಮಾಡುವಂತೆ ಸೂಚಿಸಲಾಗಿದೆ. ಮುಳುಗಡೆ ಹಡಗಿನ ಸುತ್ತ ಕೋಸ್ಟ್ ಗಾರ್ಡ್ ಶಿಪ್ ಗಳ ಮೂಲಕವೂ ಕಣ್ಗಾವಲು ಇರಿಸಲಾಗಿದೆ.
- ಮಂಗಳೂರಿನ ಉಚ್ಚಿಲ ಬಟ್ಟಪಾಡಿ ಕಡಲ ತೀರದಲ್ಲಿ ಮುಳುಗಡೆಯಾದ ಹಡಗಿನಲ್ಲಿ ಬರೋಬ್ಬರಿ 220 ಮೆಟ್ರಿಕ್ ಟನ್ ತೈಲ ಸೋರಿಕೆ ಆತಂಕ ಎದುರಾಗಿದೆ.ಸಿರಿಯಾ ದೇಶದ ಎಂ.ಬಿ.ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಜೂ.23ರಂದು ಮುಳುಗಡೆಯಾಗಿತ್ತು. ಚೀನಾದಿಂದ ಲೆಬನಾನ್ ಗೆ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿತ್ತು. ತಾಂತ್ರಿಕ ಕಾರಣದಿಂದ ಮಂಗಳೂರು ಸಮುದ್ರದಲ್ಲಿ ಹಡಗು ಮುಳುಗಡೆಯಾಗಿದೆ. ಹಡಗಿನ ತೈಲ ಸೋರಿಕೆಯಾದ್ರೆ ಮತ್ಸ್ಯ ಸಂಕುಲ ನಾಶ ಮತ್ತು ಮೀನುಗಾರರಿಗೆ ಆಘಾತ ಎದುರಾಗಲಿದೆ. ತೈಲ ಸೋರಿಕೆ ಆತಂಕ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್, ದ.ಕ ಜಿಲ್ಲಾಡಳಿತ ಅಲರ್ಟ್ ವಹಿಸಿಕೊಂಡಿದೆ.