ಮಂಗಳೂರು : ಬೈಕಿಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಹಸವಾರ ಮಹಿಳೆ ಮೃತಪಟ್ಟ ಘಟನೆ ಮೇ 7 ರ ಮಧ್ಯಾಹ್ನ ಬಜ್ಪೆಯ ಪಾಪಿಲಾನ್ ಬಾರ್ ಸಮೀಪ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಜೋಕಟ್ಟೆ ನಿವಾಸಿ ಶಶಿಕಲಾ(45) ಎಂದು ಗುರುತಿಸಲಾಗಿದೆ. ಇವರು ತನ್ನ ಪತಿಯೊಂದಿಗೆ ತೆರಳುತ್ತಿದ್ದರು. ಬೈಕ್ ಚಲಾಯಿಸುತ್ತಿದ್ದ ಶಶಿಕಲಾ ಅವರ ಪತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಅಪಘಾತಕ್ಕೆ ಕಾರಣವಾದ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ
Follow us on Social media