ಮಂಗಳೂರು : ಭಾರತೀಯ ಸೇನಾ ಯೋಧರೋರ್ವರು ಹೃದಯಾಘಾತದಿಂದ ಉತ್ತರ ಪ್ರದೇಶದ ಮಥುರಾದಲ್ಲಿ ಸಾವನ್ನಪ್ಪಿದ್ದಾರೆ.
ಮೃತರನ್ನು ಬೆಳ್ತಂಗಡಿಯ ಬಾರ್ಯದ ನಿವಾಸಿ ಭಾರತೀಯ ಸೇನಾ ಯೋಧ ಸಂದೇಶ್ ಶೆಟ್ಟಿ (34) ಎನ್ನಲಾಗಿದೆ.
ರಜೆಯಲ್ಲಿ ಊರಿಗೆ ಬಂದವರು ಕಳೆದ ಸೋಮವಾರವಷ್ಟೇ ಮರಳಿ ಕರ್ತವ್ಯಕ್ಕೆ ಹಿಂತಿರುಗಿದ್ದರು. ಸಂದೇಶ್ ಅವರು ಮಥುರಾದಲ್ಲಿನ ಕ್ವಾರೆಂಟೈನ್ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು ಅಲ್ಲಿಯೇ ಹೃದಯಾಘಾತಕ್ಕೀಡಾಗಿರುವುದಾಗಿ ತಿಳಿದು ಬಂದಿದೆ. ಇವರು ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
Follow us on Social media