ಮಂಗಳೂರು : ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಯಾವುದೇ ಅಧಿಕ ಶುಲ್ಕ ವಿಧಿಸದೆ ಬಸ್ ಪಾಸ್‌ನ ಕಾಲಾವಧಿ ವಿಸ್ತರಿಸುವಂತೆ ಆಗ್ರಹಿಸಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು.
ಈ ಬಗ್ಗೆ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ‘ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಬಸ್ ಪಾಸ್ ಕೊಡಬೇಕೆಂದು ಈ ಮೊದಲು ಕೂಡಾ ವಿದ್ಯಾರ್ಥಿ ಪರಿಷತ್ ಕೆಎಸ್‌ಆರ್‌ಟಿಸಿ ನಿಗಮದಿಂದ ಮನವಿಯನ್ನು ಮಾಡಿಕೊಂಡೇ ಬಂದಿದೆ.
ಕೊರೋನಾದ ಕಾರಣದಿಂದ ಮೇ ತಿಂಗಳಿನಲ್ಲಿ ಮುಗಿಯಬೇಕಿದ್ದ ಶೈಕ್ಷಣಿಕ ವರ್ಷ ಸಪ್ಟೆಂಬರ್‌ನ ಕೊನೆಯಲ್ಲಿ ಅಂತ್ಯವಾಗುತ್ತಿದೆ. ಹಾಗೆಯೇ ಕಾನೂನು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಅಕ್ಟೋಬರ್‌ನಲ್ಲಿ ಮುಗಿಯುತ್ತದೆ. ಹೀಗಿರುವಾಗ 3 ತಿಂಗಳು ವಿದ್ಯಾರ್ಥಿಗಳು ಬಸ್‌ಪಾಸ್ ಇಲ್ಲದೆ ಬಸ್ಸಿನಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಆದರೆ ನಿನ್ನೆ ಒಂದು ನೋಟೀಸ್ ಬರುತ್ತೆ ಏನಂದ್ರೆ ಕೇವಲ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅಧಿಕ ಶುಲ್ಕ ಕಟ್ಟಿಸಿಕೊಂಡು 3 ತಿಂಗಳ ಕಾಲ ವಿಸ್ತರಣೆ ಮಾಡಬೇಕು ಅಂತ.
ಆದರೆ ವಿದ್ಯಾರ್ಥಿ ಪರಿಷತ್ ಈ ಸಂದರ್ಭ ಸಾರಿಗೆ ಸಚಿವರಲ್ಲಿ ಮನವಿ ಮಾಡಿಕೊಳ್ಳುವುದು ಏನೆಂದರೆ ಯಾವುದೇ ಅಧಿಕ ಶುಲ್ಕ ಕಟ್ಟಿಸಿಕೊಳ್ಳದೆ ಈಗ ಇರುವ ಬಸ್ ಪಾಸ್‌ನ್ನು ಅವಧಿ ಮುಗಿಯುವವರೆಗೂ ನೀಡಬೇಕು.
ಇಲ್ಲವಾದಲ್ಲಿ ಮುಂದಿನ ದಿನ ವಿದ್ಯಾರ್ಥಿಗಳು ಉಗ್ರವಾದ ಹೋರಾಟಕ್ಕಿಳಿಯಬಹುದು’ ಎಂದು ಕಿಡಿಕಾರಿದರು.
Follow us on Social media