ಮಂಗಳೂರು : ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಯುವಕನೋರ್ವ ಮೊಬೈಲ್ ಟವರ್ ಏರಿ ಅವಾಂತರ ಸೃಷ್ಟಿಸಿದ ಘಟನೆ ನಗರದ ಹೊರವಲಯದ ಅಡ್ಯಾರ್ ಎಂಬಲ್ಲಿ ಏ.18 ರ ಸೋಮವಾರ ಬೆಳಗ್ಗೆ ನಡೆದಿದೆ.
ಯುವಕನನ್ನು ಬಂಟ್ವಾಳದ ಕೊಡಮನ್ ಕಂಜಾರದ ನಿವಾಸಿ ಸುಧೀರ್ ಎಂದು ಗುರುತಿಸಲಾಗಿದೆ. ಈತ ತನ್ನದೇ ಊರಿನ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಅವರಿಬ್ಬರ ನಡುವೆ ಮನಸ್ತಾಪ ಆಗಿದ್ದು ಹೀಗಾಗಿ ಅಡ್ಯಾರ್ ಬಳಿ ಇರುವ ಮೊಬೈಲ್ ಟವರ್ ಮೇಲೆ ಹತ್ತಿ ಕುಳಿತು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ವೇಳೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನ್ನನ್ನು ಹರಸಾಹಸಪಟ್ಟರು ಕೊನೆಗೆ ಯುವಕ ಕೆಳಗಿಳಿಯಲು ನಿರಾಕರಿಸಿದ್ದಾನೆ. ಕೊನೆಗೆ ಪ್ರೀತಿಸಿದ ಹುಡುಗಿಯೇ ಬಂದು ಮನವೊಲಿಸಿದ ಬಳಿಕ ಕೆಳಗೆ ಇಳಿದಿದ್ದಾನೆ.
ಬಳಿಕ ಹೊಯ್ಸಳ ತಂಡವು ಈತನನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
Follow us on Social media