ಮಂಗಳೂರು: ದೇಶದೊಳಗೆ ಉಗ್ರರು ನುಸುಳಿರುವ ಮಾಹಿತಿ ಇರುವ ಹಿನ್ನೆಲೆಯಲ್ಲಿ ರಾಷ್ಟ್ರದೆಲ್ಲೆಡೆ ತೀವ್ರ ಕಟ್ಟೇಚ್ಚರ ವಹಿಸಲಾಗಿದೆ. ಮಂಗಳೂರಿನಲ್ಲಿ ತೀವ್ರ ತಪಾಸಣೆಯ ಸಂದರ್ಭ ಅನುಮಾನಾಸ್ಪದವಾಗಿ ಪತ್ತೆಯಾದ 9 ಮಂದಿಯನ್ನು ವಿಶೇಷ ತಂಡ ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರಿನ ಪಂಪ್ ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಅನುಮಾನಾಸ್ಪದವಾಗಿದ್ದ 9 ಮಂದಿಯನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ವಶಕ್ಕೆ ಪಡೆದವರ ಪೈಕಿ ಮಡಿಕೇರಿ, ಕೇರಳ ಮತ್ತು ಮಂಗಳೂರು ನಿವಾಸಿಗಳು ಇದ್ದಾರೆ ಎಂದು ತಿಳಿದು ಬಂದಿದೆ. ನ್ಯಾಶನಲ್ ಕ್ರೈಮ್ ಇನ್ವೆಶ್ಟಿಗೇಶನ್ ಬ್ಯೂರೋ-ಗಾವರ್ನ್ ಮೆಂಟ್ ಆಫ್ ಇಂಡಿಯಾ ಎಂಬ ಫಲಕವಿರುವ ಕಾರೊಂದನ್ನು ಅನುಮಾನಾಸ್ಪದ ವ್ಯಕ್ತಿಗಳು ಹೊಂದಿದ್ದರು.ಈ ಕಾರಿನಲ್ಲಿ ಅವರು ಮಂಗಳೂರಿನ ಲಾಡ್ಜ್ ಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಸದ್ಯ ಅನುಮಾನಾಸ್ಪದ ವ್ಯಕ್ತಿಗಳಾನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತೀವ್ರ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.
Follow us on Social media