ಮಂಗಳೂರು: 21 ವರ್ಷದ ಬಂಗಾಳಿ ಹುಲಿ ‘ವಿಕ್ರಮ್’ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಸೋಮವಾರ ನಿಧನವಾಗಿದೆ.
ಪಾರ್ಕ್ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ಹೇಳಿದಂತೆ ವಿಕ್ರಮ್ ಅನ್ನು ಶಿವಮೊಗ್ಗದ ತಾವರೆಕೊಪ್ಪ ಸಿಂಹ ಮತ್ತು ಹುಲಿ ಅಭಯಾರಣ್ಯದಿಂದ 2003ರಲ್ಲಿ ಇಲ್ಲಿಗೆ ತರಲಾಗಿತ್ತು.
ವಿಕ್ರಮ್ ತನ್ನ ಜೀವಿತಾವಧಿಯಲ್ಲಿ ‘ಕದಂಬ’ ‘ಕೃಷ್ಣ’ ‘ವಿನಯಾ’ ‘ಆಲಿವರ್’ ‘ಅಕ್ಷಯ್’ ‘ಮಂಜು’ ‘ಅಮರ್’ ‘ಅಕ್ಬರ್’ ‘ಆಂಟನಿ’ ಮತ್ತು ’ನಿಶಾ’ ಎಂಬ ಹುಲುಗಳಿಗೆ ತಂದೆಉಯಾಗಿತ್ತು. ಈ ಮರಿಗಳು ರಾಜಸ್ಥಾನ, ಗುಜರಾತ್, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮೈಸೂರಿನ ಮೃಗಾಲಯಗಳಲ್ಲಿ ಹೊಸ ನೆಲೆಗಳನ್ನು ಪಡೆದಿದೆ.
ವಿಕ್ರಮ್ ಕಳೆದ ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿತ್ತು, ಡ್ರಿಪ್ಸ್ ಹಾಗೂ ಇತರೆ ಸಲಕರಣೆಗಳೊಂದಿಗೆ ಹುಲಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
“ವಿಕ್ರಮ್ ಕಳೆದ ಒಂದು ವಾರದಿಂದ ಆಹಾರ ಸೇವನೆ ನಿಲ್ಲಿಸಿತ್ತುಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆ ಮತ್ತು ದೃಷ್ಟಿಹೀನತೆಯಿಂದ ಬಳಲುತ್ತಿತ್ತು” ಭಂಡಾರಿ ಹೇಳೀದ್ದಾರೆ,
ಇದೀಗ ಮೃತ ಹುಲಿಯ ಅಂಗಾಂಶದ ಮಾದರಿಗಳನ್ನು ಬೆಂಗಳೂರಿನ ಲ್ಯಾಬ್‌ಗೆ ಕಳುಹಿಸಲಾಗಿದೆ.
Follow us on Social media