Breaking News

ಮಂಗಳೂರು: ಪಾರ್ಕ್ ಮಾಡಲಾಗಿದ್ದ ಬಸ್‌ನಿಂದ ಹಣ ಕಳವು-ವೀಡಿಯೋ ವೈರಲ್

ಮಂಗಳೂರು : ಸ್ಟೇಟ್‌ಬ್ಯಾಂಕ್‌ನಲ್ಲಿ ಪಾರ್ಕ್ ಮಾಡಲಾಗಿದ್ದ ಬಸ್‌ವೊಂದರಿಂದ ವ್ಯಕ್ತಿಯೊಬ್ಬ ಹಣ ಕಳವುಗೈಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಟೇಟ್‌ಬ್ಯಾಂಕ್ ಬಸ್‌ನಿಲ್ದಾಣ-ಉಪ್ಪಿನಂಗಡಿ ನಡುವೆ ಸಂಚರಿಸುವ ಬಸ್‌ ಇದಾಗಿದ್ದು, ಸ್ಟೇಟ್‌ಬ್ಯಾಂಕ್‌ನಲ್ಲಿ ಪಾರ್ಕ್ ಮಾಡಲಾಗಿತ್ತು. ಚಾಲಕ ಮತ್ತು ನಿರ್ವಾಹಕ ಊಟಕ್ಕಾಗಿ ಹೊರಗೆ ಹೋಗಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಬಸ್‌ನೊಳಗೆ ಆಗಮಿಸಿ ಬಸ್‌ನಲ್ಲಿ ಕಂಡಕ್ಟರ್ ಬ್ಯಾಗ್‌ನಲ್ಲಿ ಇರಿಸಲಾಗಿದ್ದ ಹಣವನ್ನು ಕದ್ದಿದ್ದಾನೆ. ಈ ವೇಳೆ ಯಾವುದೇ ಪ್ರಯಾಣಿಕರು ಬಸ್‌ನಲ್ಲಿ ಇರಲಿಲ್ಲ. ಬಸ್‌ನಿಂದ ಹಣ ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×