ಮಂಗಳೂರು : ಕರಾವಳಿಯ ಪ್ರಖ್ಯಾತ ಮಂಗಳೂರಿನ ಪ್ರಖ್ಯಾತ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಕಾಂಗ್ರೆಸ್ ನಾಯಕ ಐಸ್ ಕ್ರೀಮ್ ಸವಿದಿದ್ದಾರೆ.
ನಗರದ ಲಾಲ್ ಬಾಗ್ ನಲ್ಲಿರುವ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ಗೆ ಗುರುವಾರ ರಾತ್ರಿ ಬಿಗಿ ಭದ್ರತೆಯೊಂದಿಗೆ ಕಾಂಗ್ರೆಸ್ ಮುಖಂಡರೊಂದಿಗೆ ಆಗಮಿಸಿದ ರಾಹುಲ್ ಗಾಂಧಿ ತನ್ನಿಷ್ಟದ ಐಸ್ ಕ್ರೀಂ ಸವಿದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ , ಕೆ ಸಿ ವೇಣುಗೋಪಾಲ್, ನಲ್ಪಾಡ್, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ರಾಹುಲ್ ಗೆ ಸಾಥ್ ನೀಡಿದ್ದರು.
ಇದೇ ಸಂದರ್ಭದಲ್ಲಿ ರಾಹುಲ್ ಅವರೊಂದಿಗೆ ಸೆಲ್ಫಿಗೆ ಜನ ಮುಗಿ ಬಿದ್ದ ಘಟನೆಯೂ ನಡೆಯಿತು.
ಜನದ ಕ್ರೇಜ್ ನೋಡಿ ಸೆಲ್ಫಿಗೆ ರಾಹುಲ್ ಕೂಡ ಸಹಕರಿಸಿ ಮಾದರಿಯಾದರು.
Follow us on Social media