ಮಂಗಳೂರು: ನಗರ ಹೊರವಲಯದ ಪ್ರಸಿದ್ಧ ಪಣಂಬೂರು ಬೀಚ್ ನಲ್ಲಿ ಗಬ್ಬು ನಾರುವ ಫಾಸ್ಟ್ ಫುಡ್ ಸೆಂಟರ್ ಗಳಿಗೆ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ದಿಢೀರ್ ದಾಳಿ ನಡೆಸಿ 8-10 ಅಂಗಡಿ ಬಂದ್ ಮಾಡಿದ್ದರು.
ವರ್ಷಾನುಗಟ್ಟಲೆ ಲೈಸೆನ್ಸ್ ಇಲ್ಲದೆ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರು. ತಿಂಡಿ ಕಾಯಿಸಲು ಕಪ್ಪಾಗಿ ಜಿಡ್ಡುಗಟ್ಟಿದ್ದ ಎಣ್ಣೆ, ಬಳಸುತ್ತಿದ್ದು, ನೀರು ಕೂಡ ಹಾಳಾಗಿತ್ತು. ಗೋಬಿ ಫ್ಲವರ್ ಗಳಲ್ಲಿ ಹುಳು ಇದ್ದುದನ್ನು ನೋಡಿ ಶಾಕ್ ಆದ ಜಿಲ್ಲಾಧಿಕಾರಿ, ಗಬ್ಬು ನಾರುತ್ತಿದ್ದ ಗೋಬಿ ಮಂಚೂರಿಗಳನ್ನು ಚರಂಡಿಗೆಸೆದು ಪರೀಕ್ಷೆಗೆ ಕಳಿಸಿದ್ದರು.
ದಿನವೂ ಸಾವಿರಾರು ಜನರು ಸೇರುವ ಪಣಂಬೂರು ಬೀಚ್ ನಲ್ಲಿ ಗಬ್ಬೆದ್ದ ಸ್ಥಿತಿ ನಿರ್ಮಾಣವಾಗಿದ್ದು, ಬೀಚ್ ಕ್ಲೀನಿಂಗ್ ಕಾರ್ಯಕ್ರಮಕ್ಕೆ ತೆರಳಿದ್ದ ಜಿಲ್ಲಾಧಿಕಾರಿ ಪಾಲಿಕೆ ಆಡಳಿತವನ್ನು ತರಾಟೆ ಗೆ ತೆಗೆದುಕೊಂಡರು. ಸ್ಥಳದಲ್ಲೇ ಆಹಾರ ಇಲಾಖೆ ಅಧಿಕಾರಿಗಳಿಗೆ ಫೋನಾಯಿಸಿ ಚಳಿ ಬಿಡಿಸಿದರು.
Follow us on Social media