ಮಂಗಳೂರು : ದ.ಕದಲ್ಲಿ ಜು 19ರ ಭಾನುವಾರದಂದು ಪೂರ್ತಿ ಲಾಕ್‌ಡೌನ್ ಇರಲಿದ್ದು, ಪ್ರತಿ ದಿನದಂತೆ ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಲಾಕ್ ಡೌನ್ ರಿಯಾಯಿತಿ ನಾಳೆ ಇರುವುದಿಲ್ಲ.
ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಪ್ರತೀ ಭಾನುವಾರ ಲಾಕ್‌ಡೌನ್ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಅಲ್ಲದೇ, ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ವಾಹನ ಓಡಾಟ ಹಾಗೂ ಜನರ ಓಡಾಟಕ್ಕೆ ನಿಷೇಧ ಹೇರಲಾಗಿತ್ತು. ಜು 19ರ ಭಾನುವಾರದಂದೂ ಕೂಡಾ ಜಿಲ್ಲೆ ಸಂಪೂರ್ಣ ಲಾಕ್‌ಡೌನ್ ಆಗಲಿದ್ದು, ಜಿಲ್ಲಾಡಳಿತ ಈ ಹಿಂದೆ ಘೋಷಣೆ ಮಾಡಿದ್ದ ಸಂಡೇ ಲಾಕ್‌ಡೌನ್ ಯಥಾಸ್ಥಿತಿಯಾಗಿ ಮುಂದುವರೆಯಲಿದೆ.
ಲಾಕ್‌ಡೌನ್ ಇದ್ದರೂ ಕೂಡಾ ಜನರಿಗೆ ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಅಗತ್ಯ ವಸ್ತುಗಳು ಹಾಗೂ ಮೂಲಭೂತ ಅವಶ್ಯಕತೆಗಳನ್ನು ಖರೀದಿ ಮಾಡಲು ರಿಯಾಯಿತಿ ನೀಡಲಾಗಿತ್ತು. ಆದರೆ, ಜು 19ರ ಭಾನುವಾರ ಆ ರಿಯಾಯಿತಿಗೆ ಅವಕಾಶವಿರುವುದಿಲ್ಲ.
ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡಲಾಗಿದ್ದರೂ ಈ ಹಿಂದೆ ರಾಜ್ಯ ಸರ್ಕಾರ ಘೋಷಿಸಿರುವ ಸಂಡೇ ಲಾಕ್ ಡೌನ್ ಯಥಾಸ್ಥಿತಿ ಜಿಲ್ಲೆಯಲ್ಲೂ ಮುಂದುವರಿಯಲಿರುವುದರಿಂದ, ಜಿಲ್ಲಾಡಳಿತ ಘೋಷಿಸಿದ 8-10 ರ ವಿನಾಯಿತಿ ಅನ್ವಯವಾಗುವುದಿಲ್ಲ.
Follow us on Social media