ಮಂಗಳೂರು : ದ.ಕ. ಜಿಲ್ಲೆಯಲ್ಲಿ ರವಿವಾರ ಒಂದೇ ದಿನ ಬರೋಬ್ಬರಿ 147 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಸೋಂಕಿತರ ಸಂಖ್ಯೆ 1232ಕ್ಕೆ ಏರಿಕೆಯಾಗಿದೆ.
ರವಿವಾರದಂದು ಒಟ್ಟು 378 ಮಂದಿಯ ಪರೀಕ್ಷಾ ವರದಿ ಲಭ್ಯವಾಗಿದ್ದು ಈ ಪೈಕಿ 231 ಮಂದಿಯ ವರದಿ ನೆಗೆಟಿವ್ ಆಗಿದೆ. ಇನ್ನು ರವಿವಾರದಂದು ಜಿಲ್ಲೆಯಲ್ಲಿ 38 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆ ಮೂಲಕ 554 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ 666 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಈ ನಡುವೆ 576 ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ. 75 ಮಂದಿಯನ್ನು ನಿಗಾ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ನಡುವೆ 10 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರವಿವಾರ ಪತ್ತೆಯಾದ ಪ್ರಕರಣಗಳ ಪೈಕಿ ಪ್ರಾಥಮಿಕ ಸಂಪರ್ಕದಿಂದ 35 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 40 ಮಂದಿಯಲ್ಲಿ ಐಎಲ್ ಐ ಪ್ರಕರಣ ದಾಖಲಾಗಿದೆ. ಇಬ್ಬರಲ್ಲಿ ಸಾರಿ ಪ್ರಕರಣಗಳು ಪತ್ತೆಯಾಗಿವೆ. ರ್‍ಯಾಂಡಮ್ ಪರೀಕ್ಷೆಯಲ್ಲಿ 48 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಬ್ಬರಲ್ಲಿ ಪ್ರಿ ಸರ್ಜರಿ ಪ್ರಕರಣಾಗಳು ಪತ್ತೆಯಾಗಿವೆ. ಸೌದಿ, ಮಸ್ಕತ್, ದುಬೈನಿಂದ ಮರಳಿದ 8 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು, ಮುಂಬೈ, ಬಿಹಾರದಿಂದ ಮರಳಿದ ಒಟ್ಟು 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಪ್ರಿ ಸರ್ಜರಿ ಸ್ಯಾಂಪಲ್ ಬಿಫೋರ್ ಡೆಲಿವರಿ ಇಬ್ಬರಲ್ಲಿ, ಪ್ರಿ ಸರ್ಜರಿ ಸ್ಯಾಂಪಲ್ ಬಿಫೋರ್ ಸರ್ಜರಿ ಒಬ್ಬರಲ್ಲಿ, ಪ್ರಿ ಸರ್ಜರಿ ಸ್ಯಾಂಪಲ್ ಬಿಫೋರ್ ಬಯೋಪ್ಸಿ ಒಬ್ಬರಲ್ಲಿ ಹಾಗೂ ಹಡಗಿನ ಮೂಲಕ ಮಲೇಶ್ಯಾದಿಂದ ಮರಳಿದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
Follow us on Social media