ಮಂಗಳೂರು : ದ್ವಿತೀಯ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೋರ್ವಳು ಕಾಲೇಜಿಗೆಂದು ಹೋದವಳು ಅತ್ತ ತರಗತಿಗೆ ತೆರಳದೇ ಇತ್ತ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದವಳನ್ನು ಕಲ್ಪನಾ (19) ಎಂದು ಗುರುತಿಸಲಾಗಿದೆ.
ಘಟನೆ ವಿವರ
ಕಲ್ಪನಾ ನಗರದ ಕಾರ್ ಸ್ಟ್ರೀಟ್ ಗರ್ಲ್ಸ್ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿವರೆಗೆ ವ್ಯಾಸಂಗ ಮಾಡಿದ್ದು, ದ್ವೀತಿಯ ಪಿ.ಯು.ಸಿಗೆ ಕಾಲೇಜಿಗೆ ಹೋಗದೇ ಮನೆಯಲ್ಲೇ ಕುಳಿತು ಕಲಿಯುತ್ತಿದ್ದಳು. ಮೇ.22 ರಂದು ಬೆಳಗ್ಗೆ ತಣ್ಣೀರುಬಾವಿ ಫಾತೀಮಾ ಚರ್ಚ್ ಫೆರಿ ಮಖಾಂತರ ಕಾಲೇಜಿಗೆ ಹೋಗಿದ್ದಳು.
ಆದರೆ ಸಂಜೆಯವರೆಗೂ ಆಕೆ ಮರಳಿ ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಕಾಲೇಜು ಪ್ರಾಂಶುಪಾಲರಿಗೆ ಪೋನ್ ಮಾಡಿ ವಿಚಾರಿಸಿದಾಗ ಕಲ್ಪನಾ ರವರು ಶಾಲೆಗೆ ಬರಲಿಲ್ಲವೆಂದು ತಿಳಿಸಿದ್ದಾರೆ. ಆದರೂ ಮನೆಯವರು ಸುಲ್ತಾನ್ ಬತ್ತೇರಿಯಿಂದ ಬರುವ ಕೊನೆಯ ಫೆರಿಯಲ್ಲಿ ಮನೆಗೆ ಬರುಬಹುದೆಂದು ಭಾವಿಸಿ ಕಾದರೂ ಆಕೆ ಮನೆಗೆ ಬಂದಿರುವುದಿಲ್ಲ.
ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಈಕೆ ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಚಹರೆ ಗುರುತುಗಳು
ಹೆಸರು: ಕುಮಾರಿ ಕಲ್ಪನಾ
ಪ್ರಾಯ: 19 ವರ್ಷ
ಎತ್ತರ: 5 ಅಡಿ,
ಬಣ್ಣ: ಬಿಳಿ ಮೈಬಣ್ಣ
ಭಾಷೆ: ಕನ್ನಡ, ಹಿಂದಿ
ಬಟ್ಟೆ ಬರೆ: ನೀಲಿ ಬಣ್ಣದ ಚೂಡಿದಾರ ಟಾಪ್, ನೀಲಿ ಬಣ್ಣದ ಪ್ಯಾಂಟ್ ಬಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.