ಮಂಗಳೂರು : ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ದುಬೈನಿಂದ ಮಂಗಳೂರಿಗೆ ಎರಡನೇ ವಿಶೇಷ ವಿಮಾನ ಆಗಮನವಾಗಿದ್ದು ಮೇ 18 ರ ಸೋಮವಾರ ಸಂಜೆ 7.45 ಕ್ಕೆ 178 ಪ್ರಯಾಣಿಕರು ಮಂಗಳೂರಿಗೆ ಬಂದಿಳಿದಿದ್ದಾರೆ.
178 ಪ್ರಯಾಣಿಕರ ಪೈಕಿ 99 ಪುರುಷರು, 67 ಮಹಿಳೆಯರು, 11 ಮಕ್ಕಳು ಮತ್ತು ಒಬ್ಬ ನವಜಾತ ಶಿಶು ಸೇರಿದೆ.
ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್, ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, ವಿಮಾನ ನಿಲ್ದಾಣ ನಿರ್ದೇಶಕ ವಿ ವಿ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಯಾರಿ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ವಿಮಾನ ಆಗಮನದ ವೇಳೆ ಉಪಸ್ಥಿತರಿದ್ದರು.
Follow us on Social media