ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಎಂಟನೇ ಬಲಿಯಾಗಿದೆ.
ಮೃತರನ್ನು ಮಹಾರಾಷ್ಟ್ರದಿಂದ ಬಂದಿದ್ದ 26 ವರ್ಷದ ಯುವಕ ಎಂದು ತಿಳಿದುಬಂದಿದೆ.
ಈತ ಮಹಾರಾಷ್ಟ್ರದಿಂದ ಬಂದು ಕ್ವಾರೆಂಟೈನ್ ಮುಗಿಸಿ ಮನೆಗೆ ಹೋಗಿದ್ದು, ಕಿಡ್ನಿ ಸಮಸ್ಯೆ ಹಿನ್ನೆಲೆ ಮತ್ತೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಯುವಕ ಸಾವನ್ನಪ್ಪಿದ್ದಾನೆ.
ಈತನ ಕೊರೊನಾ ಪರೀಕ್ಷೆ ಮಾಡಲಾಗಿದ್ದು ಪರೀಕ್ಷೆ ವೇಳೆ ಕೊರೊನಾ ಇರುವುದು ದೃಢಪಟ್ಟಿದೆ.
Follow us on Social media