ಮಂಗಳೂರು: ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ಇಂದು ಸಂಜೆ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿದ್ದ ದಂಪತಿ ಮೃತಪಟ್ಟ ಘಟನೆಯು ನಡೆದಿದೆ.
ಬೈಕ್ ಮೇಲೆ ಭಾರೀ ಗಾತ್ರದ ಟ್ರಕ್ ಹರಿದುಹೋದ ಪರಿಣಾಮವಾಗಿ ಬೈಕ್ ನ ಹಿಂಬದಿ ಸವಾರೆ ಪ್ರಿಯಾ ಫರ್ನಾಂಡೀಸ್(25) ಸ್ಥಳದಲ್ಲೇ ಮೃತಪಟ್ಟರೆ, ಅವರ ಪತಿ ರಾಯನ್ ಫರ್ನಾಂಡೀಸ್(34) ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದರು.
ಮೃತರು ಬಜಾಲ್ ನವರು ಎಂದು ತಿಳಿದುಬಂದಿದ್ದು, ಇವರು ಮಾಸ್ತಿಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇವರು ಕಂಕನಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಗಳು ಎಂದು ತಿಳಿದುಬಂದಿದೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
Follow us on Social media