ಮಂಗಳೂರು : ತುಳು ಚಲನ ಚಿತ್ರ ನಟ, ರಂಗ ಭೂಮಿ ಕಲಾವಿದರಾಗಿ ಕರಾವಳಿಯಲ್ಲಿ ಮನೆ ಮಾತಗಿರುವ ತೆಲಿಕೆದ ಬೊಳ್ಳಿ ಖ್ಯಾತಿಯ ದೇವದಾಸ್ ಕಾಪಿಕಾಡ್ ಅವರು ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆಯಾಗಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಕೊಡ ಮಾಡುವ ಈ ಪುರಸ್ಕಾರಕ್ಕೆ ತುಳು ನಾಟಕ ಹಾಗೂ ಸಿನಿಮಾ ಕ್ಷೇತ್ರದ ಸಾಧನೆಗಾಗಿ ಕಾಪಿಕಾಡ್ ಅವರನ್ನು ಆಯ್ಕೆ ಮಾಡಲಾಗಿದೆ.
ಮಂಗಳೂರಿ ವಿಶ್ವ ವಿದ್ಯಾನಿಲಯದ ೪೦ನೇ ವರ್ಷದ ವಾರ್ಷಿಕ ಕೊನ್ವೊಕೇಷನ್ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಿ ವಿಶ್ವ ವಿದ್ಯಾನಿಲಯ ಗೌರವಿಸಲಿದೆ.ಇವರ ಜೊತೆಗೆ ಶಿಕ್ಷಣ ಹಾಗೂ ಸಾಮಾಜಿಕ ಸೇವೆಗಾಗಿ ಶ್ರೀಮತಿ ಹೇಮಾವತಿಯವರು, ಹಾಗೂ ಸಾಮಾಜಿಕ ಸೇವೆ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹರಿಕೃಷ್ಣ ಪುನರೂರು ಅವರನ್ನು ಆಯ್ಕೆ ಮಾಡಲಾಗಿದೆ.
Follow us on Social media