ಮಂಗಳೂರು: ತುಳು ಚಿತ್ರ ‘ಪೆಪ್ಪೆರೆರೆ ಪೆರೆರೆರೆ’ ಪೈರಸಿ ಮಾಡಿರುವ ಬಗ್ಗೆ ಯೂಟ್ಯೂಬ್ ಚಾನೆಲ್‌ವೊಂದರ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಶಾನ್ ವರುಣ್ ಮೂವೀಸ್ ಸಂಸ್ಥೆಯು ‘ಪೆಪ್ಪೆರೆರೆ ಪೆರೆರೆರೆ’ ಎಂಬ ತುಳು ಚಲನಚಿತ್ರವನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅನುಮೋದನೆ ಪಡೆದು ಸುಮಾರು 1 ಕೋ.ರೂ ವೆಚ್ಚದಲ್ಲಿ ನಿರ್ಮಾಣ ಮಾಡಿ ಓಟಿಟಿ ಫ್ಲಾಟ್ ಫಾರ್ಮ್‌ನಲ್ಲಿ ಪ್ರಸಾರ ಮಾಡಿತ್ತು.
ಆದರೆ ಈ ಚಲನಚಿತ್ರವನ್ನು ತುಳು ಸೂಪರ್ ಕಾಮಿಡಿ 2.0 ಎಂಬ ಯೂಟ್ಯೂಬ್ ಚಾನೆಲ್‌ನವರು ಪೈರಸಿ ಮಾಡಿ ಸಿನಿಮಾ ಸಂಸ್ಥೆಯವರ ಅನುಮತಿ ಪಡೆಯದೆ ಪ್ರಸಾರ ಮಾಡಿ ನಷ್ಟ ಉಂಟುಮಾಡಿದ್ದಾರೆ ಎಂದು ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
Follow us on Social media