ಮಂಗಳೂರು : ಅಗತ್ಯ ಬಿದ್ದಲ್ಲಿ ಕರಾವಳಿಯಲ್ಲೂ ಬುಲ್ಡೋಜರ್ ಮಾದರಿ ಎಂದು ಬಂಟ್ವಾಳದಲ್ಲಿ ಹೇಳಿಕೆ ನೀಡಿದ್ದ ಸಿ.ಟಿ. ರವಿಗೆ ಕಾಂಗ್ರೆಸ್ ಮುಖಂಡ ಸುಹೇಲ್ ಕಂದಕ್ ಸವಾಲು ಹಾಕಿದ್ದಾರೆ.
ಬಿಜೆಪಿಯವರಿಗೆ ತಾಕತ್ತಿದ್ದರೆ ನನ್ನ ಎದೆ ಮೇಲೆ ಬುಲ್ಡೋಜರ್ ಹತ್ತಿಸಲಿ. ಆ ಮೇಲೆ ನಮ್ಮ ಸಮುದಾಯದ ಮನೆಯವರ ಮೇಲೆ ಬುಲ್ಡೋಜರ್ ಹತ್ತಿಸಲಿ. ಸಂವಿಧಾನದ ಕಾನೂನಿನ ಯಾವ ಪರಿಚ್ಛೇದಲ್ಲಿ ಬುಲ್ಡೋಜರ್ ಕಾರ್ಯಾಚರಣೆಗೆ ಅವಕಾಶ ನೀಡಿದೆ.
ಅವ್ರು ಮಾಡ್ತಾ ಇರುವುದು ಇಲ್ಲೀಗಲ್, ಅಸಂವಿಧಾನಿಕವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆಇದ್ರ ಬಗ್ಗೆ ಯಾಕೆ ಯಾರು ಕೂಡಾ ಮಾತನಾಡ್ತಾ ಇಲ್ಲ. ಒಬ್ಬರು ಕಷ್ಟದಿಂದ ಕಟ್ಟಿದ ಮನೆಯನ್ನು ಪ್ರತಿಭಟನೆ ಮಾಡಿದ್ದಾರೆ, ಧ್ವನಿ ಎತ್ತಿದ್ದಾರೆ ಎಂದು ಅವ್ರ ಧ್ವನಿ ಅಡಗಿಸುವ ಕಾರ್ಯವಾಗುತ್ತಿದೆ. .ಟಿ ರವಿ ಅವ್ರೇ ೧೯೯೨ ರಲ್ಲಿ ಬಾಬರಿ ಮಸ್ಜಿದ್ ಹೊಡೆದು ಕೋಮು ಗಲಭೆ ಸೃಷ್ಟಿದ್ದಾರೆ. ಅಡ್ವಾನಿ, ಉಮಾಭಾರತಿ, ಬಿಜೆಪಿ ನಾಯಕರ ಮನೆ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ಮಾಡುವ ತಾಕತ್ತು ಇದ್ಯಾ…? ಮಾಜವನ್ನು ಹೊಡೆಯುವಂತಹ ಹಿಂದೂ ಮುಸ್ಲಿಂ ಕಂದಕ ಸೃಷ್ಟಿಸಿದ್ದಾರೆ.
ಜನ್ರನ್ನು ಓಟ್ ಬ್ಯಾಂಕ್ ಮೂಲಕ ಬಿಜೆಪಿ ಸಫಲ ಆಗ್ತಾ ಇದೆ. ಕಾನೂನು ಪಾಲಕರು ಇಂತಹ ನಾಯಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
Follow us on Social media